×
Ad

ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್‌ನಿಂದ ಚಿನ್ನ ಕಳವು

Update: 2025-02-22 20:57 IST

ಹಿರಿಯಡ್ಕ, ಫೆ.22: ಗ್ರಾಹಕರ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಜ್ಯುವೆಲ್ಲರಿ ಅಂಗಡಿಯಲ್ಲಿನ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಫೆ.21ರಂದು ಸಂಜೆ ವೇಳೆ ಹಿರಿಯಡ್ಕದಲ್ಲಿ ನಡೆದಿದೆ.

ಅಂಜಾರು ಗ್ರಾಮದ ರತ್ನಾಕರ ಎಂಬವರ ಹಿರಿಯಡಕ ಪೇಟೆಯಲ್ಲಿರುವ ಶ್ರೀಲಕ್ಷ್ಮೀ ಅನಂತಪದ್ಮನಾಭ ಜ್ಯುವೆಲ್ಲರಿ ಶಾಪ್‌ಗೆ ನವರತ್ನ ಖರೀದಿ ಮಾಡಲು ಅಪರಿಚಿತ ವ್ಯಕ್ತಿಯೋರ್ವ ಬಂದಿದ್ದು, ನವರತ್ನವೊಂದನ್ನು ಖರೀದಿಸಿ ಆ ನಂತರ ಅಂಗಡಿ ಮಾಲಕರಲ್ಲಿ ಬೇರೆ ಚಿನ್ನ ತೋರಿಸಲು ಹೇಳಿ ಅವರ ಗಮನಕ್ಕೆ ಬಾರದಂತೆ ಡ್ರಾವರ್‌ಗೆ ಕೈಹಾಕಿ ರಿಪೇರಿಗಾಗಿ ಗ್ರಾಹಕರು ನೀಡಿದ್ದ 22.35 ಗ್ರಾಂ ಚಿನ್ನವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News