×
Ad

ದೇವಾಲಯದ ಲೆಕ್ಕಾಚಾರದ ವಿಚಾರದಲ್ಲಿ ಹೊಡೆದಾಟ: ಪ್ರಕರಣ ದಾಖಲು

Update: 2025-02-22 21:00 IST

ಹೆಬ್ರಿ, ಫೆ.22: ನಾಡ್ಪಾಲು ಗ್ರಾಮದ ನಂದಲ ದುರ್ಗಾ ಪರಮೇಶ್ವರಿ ದೇವಸ್ಥಾನದ ಹಣದ ಲೆಕ್ಕಾಚಾರದ ವಿಷಯದಲ್ಲಿ ಪರಸ್ಪರ ಹೊಡೆದಾಡಿಕೊಂಡು ದೊಂಬಿ ನಿರ್ಮಾಣ ಮಾಡಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆ.20ರಂದು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಕಾರ್ಯಕ್ರಮವಿದ್ದು ಫೆ.21ರಂದು ಲೆಕ್ಕಚಾರದ ವಿಷಯವಾಗಿ ದೇವಸ್ಥಾನದ ಅನುವಂಶಿಕ ಆಡಳಿತ ವರ್ಗದ ಮನೋರಮಾ, ಅವರ ಗಂಡ ಶೇಖರ, ಮಗ ಪ್ರವೀಣ್ ಕುಮಾರ್ ಹಾಗೂ ಅನಿಲ್, ಸುಪ್ರೀತ್ ಹಾಗೂ ಇತರರು ಮತ್ತು ದೇವಸ್ಥಾನವನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ಕೊಡುವ ಬಗ್ಗೆ ಅರ್ಜಿ ನೀಡಿದ ಅರ್ಜೀದಾರರಾದ ವಿಜಯ್, ರಾಘವೇಂದ್ರ, ಸುದರ್ಶನ್, ಉಮೇಶ, ಶ್ರೀನಿವಾಸ ಹಾಗೂ ನಾಗರಾಜ ಮತ್ತು ಇತರರು ಪರಸ್ಪರ ಹೊಡೆದಾಡಿಕೊಂಡಿ ರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News