×
Ad

ಕನಕದಾಸ ಕ್ರಾಸ್ ರಸ್ತೆಯಲ್ಲಿ ತ್ಯಾಜ್ಯ ರಾಶಿ: ತೆರವಿಗೆ ಆಗ್ರಹ

Update: 2025-03-02 17:37 IST

ಉಡುಪಿ, ಮಾ.2: ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯನ್ನು ಸಂಪರ್ಕಿಸುವ ಕನಕದಾಸ ರಸ್ತೆಯ ಅಡ್ಡ ರಸ್ತೆಯ ಸಮೀಪ ಕಳೆದ ಕೆಲವು ತಿಂಗಳುಗಳಿಂದ ತ್ಯಾಜ್ಯ ರಾಶಿ ಇರುವುದು ಕಂಡುಬಂದಿದೆ.

ರಸ್ತೆ ಅಂಚಿನ ತೋಡಿನ ಹೂಳೆತ್ತಿದ ಮಣ್ಣು ಕಲ್ಲುಗಳನ್ನು ಚೀಲದಲ್ಲಿ ತ್ಯಾಜ್ಯಗಳನಞ್ನು ತುಂಬಿಡಲಾಗಿದೆ. ಹೊರ ರಾಜ್ಯ, ಹೊರಜಿಲ್ಲೆಯ ಯಾತ್ರಿಕರು ಸಂಚರಿಸುವ ರಸ್ತೆಯು ಇದಾಗಿದ್ದು, ಅಶುಚಿತ್ವದ ದರ್ಶನ ವಾಗುತ್ತಿದೆ. ಸಮಸ್ಯೆಯ ಕುರಿತು ಸಾರ್ವಜನಿಕರು ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ.

ಕೂಡಲೇ ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸಿ, ಕನಕದಾಸ ಕ್ರಾಸ್ ರೋಡಿನಲ್ಲಿರುವ ತ್ಯಾಜ್ಯ ರಾಶಿಯನ್ನು ತೆರವುಗೊಳಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News