ಶ್ರೀಕೃಷ್ಣ ಕಾರಿಡಾರ್ ಯೋಜನೆ ಜಾರಿಗೆ ಇಂಜಿನಿಯರ್ಸ್ ಸಲಹೆ ಅಗತ್ಯ: ಶಾಸಕ ಯಶ್ಪಾಲ್
ಉಡುಪಿ, ಮಾ.2: ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ನಿವಾರಣೆಯೊಂದಿಗೆ ನಗರದ ಅಭಿವೃದ್ಧಿಗಾಗಿ ಜಾರಿಗೆ ತರಲು ಉದ್ದೇಶಿಸಿರುವ ಶ್ರೀಕೃಷ್ಣ ಕಾರಿಡಾರ್ ಯೋಜನೆಗೆ ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಸಲಹೆ, ಸೂಚನೆ ಅತೀ ಅಗತ್ಯವಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ ಹೊಟೇಲೊಂದರ ಸಭಾಂಗಣದಲ್ಲಿ ಶನಿವಾರ ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಉದ್ಘಾಟನೆ ಮತ್ತು ಲಾಂಛನ ಅನಾವರಣ ನೆರವೇರಹಿಸಿ ಅವರು ಮಾತನಾಡುತಿದ್ದರು.
ಎಂಐಟಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಕಿರಣ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ನೀಲಕಂಠ ಎಂ.ಹೆಗ್ಡೆ ಪದಗ್ರಹಣ ನೆರವೇರಿಸಿದರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಪ್ರಮೋಶನ್ ಸ್ಟಿಕ್ಕರ್ ಬಿಡುಗಡೆ ಮಾಡಿದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಡಿಯುಡಿಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ ರಾಜ್ ಕೆ.ಎಂ., ಅಸೋಸಿ ಯೇಷನ್ ಉಪಾಧ್ಯಕ್ಷ ಭರತ್ ಭೂಷಣ, ಗಣೇಶ್ ಬೈಲೂರು, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು.
ದೇವಿಪ್ರಸಾದ್ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ಲಕ್ಷ್ಮೀ ನಾರಾಯಣ ಉಪಾಧ್ಯ ಪ್ರಾರ್ಥಿಸಿದರು. ಅಸೋಸಿಯೇಷನ್ ಅಧ್ಯಕ್ಷ ರಂಜನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಹರೀಶ್ ಕುಮಾರ್ ವಂದಿಸಿದರು. ಸ್ವಾತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮನೋರಂಜನಾ ಕಾರ್ಯಕ್ರಮ ಜರಗಿತು.