ಪಾಡಿಗಾರ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
Update: 2025-03-02 20:30 IST
ಹೆಬ್ರಿ, ಮಾ.2: ಅನಾರೋಗ್ಯದ ನಡುವೆ ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿರುವ ಪಾಡಿಗಾರ ನಿವಾಸಿ ಉದಯ್ ಪೂಜಾರಿ ಕುಟುಂಬಕ್ಕೆ ಪೆರ್ಡೂರು ಗೆಳೆಯರ ಬಳಗದ ತಂಡ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಮಾ.2ರಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಉದಯ್ ಪೂಜಾರಿ ತನ್ನ ಸ್ವಂತ ಸೂರನ್ನು ಕಟ್ಟಬೇಕು ಎಂಬ ಕನಸು ಅನಾರೋಗ್ಯ ಕಾರಣದಿಂದ ಪೂರ್ಣಗೊಳ್ಳಲಿಲ್ಲ. ಮಕ್ಕಳನ್ನು ಓದಿಸಬೇಕು ಈ ನಡುವೆ ಮನೆ ಕಟ್ಟುವುದು ಹೇಗೆ ಎಂಬ ಅಲೋಚನೆಯಲ್ಲಿದ್ದಾಗ ಇದನ್ನು ಗಮನಿಸಿದ ಗೆಳೆಯರ ಬಳಗ ಪೆರ್ಡೂರು ತಂಡ ಸದಸ್ಯರೇ ಒಟ್ಟುಗೂಡಿಸಿದ 5ಲಕ್ಷ ರೂ.ಹಣದಿಂದ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಪೆರ್ಡೂರು ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಸತೀಶ್ ಪಿ., ಗೌರವಾಧ್ಯಕ್ಷ ಸತೀಶ್, ಅಧ್ಯಕ್ಷ ನಿತಿನ್ ಮೆಂಡನ್, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಗೌರವ ಸಲಹೆಗಾರ ಸತೀಶ್ ಶೆಟ್ಟಿ ಕುತ್ಯಾರು ಬೀಡು, ಕೋಶಾಧಿಕಾರಿ ನಿಶ್ವಲ್ ಶೆಟ್ಟಿ, ಫಲಾನುಭವಿ ಉದಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.