ಬೈಕ್ ಸ್ಕಿಡ್: ಸವಾರ ಮೃತ್ಯು
Update: 2025-03-02 20:39 IST
ಶಿರ್ವ, ಮಾ.2: ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಶಿರ್ವ- ಬೆಳ್ಮಣ್ಣು ರಸ್ತೆಯ ಪಿಲಾರು ಪ್ರಿನ್ಸ್ ಪಾಯಿಂಟ್ ಬಳಿ ಮಾ.1ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಬೈಕ್ ಸವಾರ ವಿಠಲ(54) ಎಂದು ಗುರುತಿಸಲಾಗಿದೆ. ಬೆಳ್ಮಣ್ಣಿನಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಬೈಕ್, ಹತೋಟಿ ತಪ್ಪಿ ರಸ್ತೆಗೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸವಾರ ವಿಠಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.