ಕೋಡಿ ಉಪ್ಪುನೀರಿನ ಸಮಸ್ಯೆ ಪ್ರದೇಶಗಳಿಗೆ ಶಾಸಕ ಶಾಸಕ ಕಿರಣ್ ಕೊಡ್ಗಿ ಭೇಟಿ
Update: 2025-03-09 18:13 IST
ಕುಂದಾಪುರ, ಮಾ.9: ಕುಂದಾಪುರ ಪುರಸಭೆ ವ್ಯಾಪ್ತಿಯ ಕೋಡಿ ಭಾಗದಲ್ಲಿ ಉಪ್ಪುನೀರು ನುಗ್ಗಿರುವ ಕೋಡಿ ನಾಗಜೆಟ್ಟಿಗೇಶ್ವರ ದೇವಸ್ಥಾನದಿಂದ ಕೋಡಿ ಗಡಿಯಾರ ಹಿತ್ಲು ಪ್ರದೇಶಗಳಿಗೆ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು,
ಈ ಸಂದರ್ಭದಲ್ಲಿ ಶಾಸಕರು ಸ್ಥಳೀಯರು, ಕೃಷಿಕರ ಅಹವಾಲು ಆಲಿಸಿದರು. ಸ್ಥಳೀಯರು ಶಾಶ್ವತ ಪರಿಹಾರ ಒದಗಿಸಲು ಶಾಸಕರಿಗೆ ಮನವಿ ಸಲ್ಲಿಸಿದರು. ಕುಂದಾಪುರ ತಹಶಿಲ್ದಾರ್ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷ ಕೆ. ಮೋಹನದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಸದಸ್ಯರಾದ ಶ್ವೇತಾ, ಕಮಲಾ ಮಂಜುನಾಥ ಪೂಜಾರಿ, ದೇವಕಿ ಸಣ್ಣಯ್ಯ, ಪುರಸಭೆ ಪರಿಸರ ಅಭಿಯಂತರ ಗುರುಪ್ರಸಾದ್, ಮುಖಂಡ ರಾಜೇಶ್ ಕಾವೇರಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.