ವಿವಾಹ ನೋಂದಣಿ ದೃಢಪತ್ರ ಗೊಂದಲ ನಿವಾರಿಸಲು ಆಗ್ರಹ
Update: 2025-03-09 18:18 IST
ಉಡುಪಿ, ಮಾ.9: ಮುಸ್ಲಿಂ ಸಮುದಾಯದ ದಂಪತಿಗಳಿಗೆ ವಿವಾಹ ನೋಂದಣಿ ಪ್ರಮಾಣ ಪತ್ರಗಳನ್ನು ಜಿಲ್ಲಾ ವಕ್ಫ್ ಅಧಿಕಾರಿಗಳು ನೀಡುತ್ತಿದ್ದು ಕಳೆದ ಹಲವು ತಿಂಗಳುಗಳಿಂದ ನ್ಯಾಯಾಲಯದ ತೀರ್ಪಿನ ಹಿನ್ನಲೆಯಲ್ಲಿ ನೀಡದಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದ್ದು ಸಮುದಾಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊೃದಿನಬ್ಬ ಸರಕಾರವನ್ನು ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ವಕ್ಫ್ ಅಧಿಕಾರಿ ಹುದ್ದೆ ತೆರವಾಗಿದ್ದು ಇದರಿಂದ ಜನರಿಗೆ ಭಾರೀ ತೆೊಂದರೆಯಾಗಿದೆ. ಅಧಿಕಾರಿ ಹುದ್ದೆ ಭರ್ತಿಗೆ ಕೂಡಲೇ ಕ್ರಮಕೆೃಗೊಳ್ಳುವಂತೆ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.