×
Ad

ಮಹಿಳಾ ದಿನಾಚರಣೆ-ಎನ್ನೆಸ್ಸೆಸ್ ವಾರ್ಷಿಕ ಶಿಬಿರ ಸಮಾರೋಪ

Update: 2025-03-11 18:25 IST

ಶಿರ್ವ: ನಿಟ್ಟೆ ಉಷಾ ಇನ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಏಳು ದಿನಗಳ ಪರ್ಯಂತ ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಪ್ರೌಢ ಶಾಲೆಯಲ್ಲಿ ಜರುಗಿದ್ದು, ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಬೆಳ್ಳೆ ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗ್ಲೆ ಮಾತನಾಡಿ, ಈಗ ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿದ್ದು, ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳಿವೆ. ಪ್ರತೀ ಮನೆಗೆಳಿಂದ ತ್ಯಾಜ್ಯ ಗಳನ್ನು ಸಂಗ್ರಹಿಸಿ ಮರುಬಳಕೆಗೆ ಕಳುಹಿಸುತ್ತಿದೆ. ಇದರಿಂದ ಈ ವ್ಯವಸ್ಥೆ ಇದ್ದುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಆಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ರಾಬರ್ಟ್ ಮಾರ್ಟಿಸ್, ವೀರಾ ಫೆರ್ನಾಂಡಿಸ್, ಲೀನಾ ಡಯಾಸ್ ಶುಭ ಹಾರೈಸಿ ದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಶಿಕ್ಷಕಿಯರಾದ ವೀರಾ ಫೆರ್ನಾಂಡಿಸ್ ಮತ್ತು ಲೀನಾ ಡಯಾಸ್‌ ರವರನ್ನು ಅಭಿನಂದಿಸಲಾಯಿತು.

ಅಕ್ವಿನ್ ಡಿಸೋಜ ಶಿಬಿರದ ಸಂಕ್ಷಿಪತಿ ವರದಿ ವಾಚಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸರಿತಾ ಫೆರ್ನಾಂಡಿಸ್, ಸುಕೇಶ್ ಕೀರ್ತಿಮಾಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮನೀಷಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News