ಕುಂದಾಪುರ ಸರಕಾರಿ ಆಸ್ಪತ್ರೆ| ಡಯಾಲಿಸಿಸ್ ಘಟಕದ ಹವಾನಿಯಂತ್ರಣ ವ್ಯವಸ್ಥೆ ದುರಸ್ಥಿಗೆ ಕ್ರಮ: ಡಿಎಚ್‌ಒ
ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಸದ್ಯ 6-7 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತಿದ್ದಾರೆ. ಇಡೀ ಘಟಕದ ಎಸಿ ಕಾರ್ಯ ನಿರ್ವಹಿಸುತಿದ್ದು, ಇದರಲ್ಲಿ ಒಂದು ಎಸಿ ಮಾತ್ರ ಹಾಳಾಗಿದೆ. ಅದನ್ನು ಕೂಡಲೇ ದುರಸ್ಥಿ ಮಾಡುವುದರ ಜೊತೆಗೆ ಅಗತ್ಯ ಬಿದ್ದರೆ ಹೊಸ ಎಸಿಯನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿರುವ ಹವಾನಿಯಂತ್ರಣ (ಎಸಿ) ವ್ಯವಸ್ಥೆ ಕಳೆದ ಹಲವು ದಿನಗಳಿಂದ ಸಮರ್ಪಕ ವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ರೋಗಿಗಳ ಸುರಕ್ಷತೆಗೆ ಸಂಬಂಧಿಸಿ ದಂತೆ ಗಂಭೀರ ಸಮಸ್ಯೆ ಎದುರಾಗಿದೆ ಎಂದು ಜಾಗೃತ ಸಾರ್ವಜನಿಕರಿಂದ ಕೇಳಿಬಂದ ಆರೋಪಗಳ ಕುರಿತಂತೆ ಅವರು ಉತ್ತರಿಸುತಿದ್ದರು.
ಡಯಾಲಿಸಿಸ್ ಘಟಕದಲ್ಲಿರುವ ಹವಾನಿಯಂತ್ರಣ ವ್ಯವಸ್ಥೆ ಕಳೆದ ಒಂದು ತಿಂಗಳಿನಿಂದ ಸುವ್ಯವಸ್ಥಿತ ವಾಗಿಲ್ಲ. ಇದರಿಂದ ಇಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳಿಗೆ ಸಮಸ್ಯೆಯಾಗುತ್ತಿವೆ. ಡಯಾಲಿಸಿಸ್‌ಗೊಳ ಗಾಗುವ ರೋಗಿಗೆ ಹೈಪೋಟೆನ್ಷನ್, ಓವರ್ ಹೀಟಿಂಗ್ ಹಾಗೂ ಅಸ್ವಸ್ಥತೆ ಕಾಡದೇ ಇರಲು ಈ ವೇಳೆ ಉಷ್ಣತೆ ನಿಯಂತ್ರಿತ ಸೂಕ್ಷ್ಮ ವಾತಾವರಣ ಬೇಕಾಗುತ್ತದೆ. ಡಯಾಲಿಸಿಸ್ ಯಂತ್ರ ಸಹ ಶಾಖವನ್ನು ಉತ್ಪಾದಿಸುವುದ ರಿಂದ ಹವಾನಿಯಂತ್ರಿತ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇ ಕಾಗುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.
ಈ ಕುರಿತಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಅವರ ಗಮನ ಸೆಳೆದಿದ್ದರೂ, ಸಂಬಂಧಿತರು ಇನ್ನೂ ವ್ಯವಸ್ಥೆ ಸರಿಪಡಿಸಿಲ್ಲ ಎಂದು ಆರೋಪಿಸ ಲಾಗಿದೆ. ಹವಾನಿಯಂತ್ರಣ ವ್ಯವಸ್ಥೆಯನ್ನು ಸುವ್ಯವಸ್ಥಿತ ಗೊಳಿಸಿ ರೋಗಿಗಳ ಸುರಕ್ಷತೆಯನ್ನು ಕಾಪಾಡಲು ತಕ್ಷಣ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಿಎಚ್‌ಒ ಭೇಟಿ: ಉಡುಪಿ ಡಿಎಚ್‌ಒ ಅವರು ಮಂಗಳವಾರ ಕುಂದಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಈ ವಿಷಯವನ್ನು ಅವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಡಿಎಚ್‌ಒ ವ್ಯವಸ್ಥೆಯನ್ನು ಪರಿಶೀಲಿಸಿದ್ದು, ಕೂಡಲೇ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
‘ಕುಂದಾಪುರದ ಡಯಾಲಿಸಿಸ್ ಘಟಕದಲ್ಲಿ ಸದ್ಯ 6-7 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಡೀ ಘಟಕದಲ್ಲಿ ಎಸಿ ಕಾರ್ಯ ನಿರ್ವಹಿಸುತ್ತಿದ್ದು ಒಂದು ಎಸಿ ಹಾಳಾಗಿದೆ. ನಮಗೆ ರೋಗಿಗಳ ಆರೋಗ್ಯ ಮುಖ್ಯವಾಗಿದ್ದು ಕೂಡಲೇ ಅದನ್ನು ದುರಸ್ಥಿ ಮಾಡುವುದರ ಜೊತೆಗೆ ಆರೋಗ್ಯ ರಕ್ಷಾ ಸಮಿತಿ ಸಭೆ ಕರೆದು ಅಗತ್ಯವಿದ್ದರೆ ಹೊಸ ಎಸಿ ಅಳವಡಿಸಲು ಕ್ರಮವಹಿಸಲು ಸೂಚನೆ ನೀಡಲಾಗಿದೆ.
-ಡಾ.ನಾಗಭೂಷಣ ಉಡುಪ, ಡಿಎಚ್‌ಒ ಉಡುಪಿ.