ಪೈಪ್‌ಲೈನ್ ಕಾಮಗಾರಿಯ ಸೊತ್ತು ಕಳವು
Update: 2025-03-11 21:45 IST
ಮಣಿಪಾಲ, ಮಾ.11: ಗುತ್ತಿಗೆ ಆಧಾರದಲ್ಲಿ ನಡೆಸುತ್ತಿದ್ದ ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಹೈಡ್ರೋಲಿಕ್ ಪವರ್ ಪ್ಯಾಕ್, ಹೈಡ್ರೊಲಿಕ್ ಜಾಕಿ, ಹೈಡ್ರೊಲಿಕ್ ಜಾಕಿ ಪ್ಯಾಕಿಂಗ್,ಕಂಪ್ರೆಸರ್ ಟ್ರಾಕ್ಟರ್ ಚಿಪ್ಪರ್ ಬ್ರೇಕರ್, ಬ್ರೇಕರ್, ಡಿ ವಾಟರಿಂಗ್ ಪಂಪ್, ವೆಲ್ಡಿಂಗ್ ಮೇಶಿನ್, ಬೆಲ್ಡಿಂಗ್ ರಾಟ್, ಬ್ಲೋವರ್, ವೈಯರ್ ಬಂಡಲ್, ಜನರೇಟರ್ ಹಾಗೂ ಇತರೆ ಸಾಮಾಗ್ರಿಗಳನ್ನು ಕಳ್ಳರು ಫೆ.15ರಂದು ಕಳವು ಮಾಡಿರುವುದಾಗಿ ದೂರಲಾಗಿದೆ.
ಇದನ್ನು ಕಾಮಗಾರಿ ವಹಿಸಿಕೊಂಡಿದ್ದ ಪಶ್ಚಿಮ ಬಂಗಾಳದ ಅಜೀಜ್ ಅನ್ವರ್ ಹಾಗೂ ಸೇತಾಬುದ್ದಿನ್ ಎಂಬವರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 4,98,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.