‘ವೈಯಕ್ತಿಕ ಮಾಹಿತಿಗಳನ್ನು ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳಬೇಡಿ’
ಉಡುಪಿ, ಮಾ.13: ಆನ್‌ಲೈನ್ ವಂಚನೆ, ಸೈಬರ್ ಅಪರಾಧಗಳು ಇಂದು ದಿನೇದಿನೇ ಹೆಚ್ಚುತ್ತಿದ್ದು, ಜನರು ಅದರಲ್ಲೂ ಮಕ್ಕಳು ಮತ್ತು ಯುವಕರು ಹೆಚ್ಚೆಚ್ಚು ಜಾಗೃತರಾಗಿರಬೇಕಿದೆ. ಈ ದಿಶೆಯಲ್ಲಿ ವೈಯ ಕ್ತಿಕ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡ ಬೇಕು ಎಂದು ಸೈಬರ್ ಭದ್ರತಾ ತಜ್ಞ ಹಾಗೂ ಮ್ಯಾನೇಜ್‌ಮೆಂಟ್ ಸಲಹೆಗಾರ ಯಶವಂತ ಎ.ಎಸ್. ಹೇಳಿದ್ದಾರೆ.
ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸೈಬರ್ ಅರಿವು (ಸೈಬರ್ ಬೆದರಿಕೆ ವಿರುದ್ಧ ಜಾಗೃತರಾಗಿರುವುದು) ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡುತಿದ್ದರು.
ನಿಮ್ಮ ವೈಯಕ್ತಿಕ ಮಾಹಿತಿಗಳು, ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದನ್ನು ಕಡಿಮೆ ಮಾಡಿ. ಅಲ್ಲದೇ ಅಗತ್ಯಕ್ಕಿಂತ ಹೆಚ್ಚು ಆ್ಯಪ್‌ಗಳನ್ನು ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊ ಳ್ಳಲೇ ಬೇಡಿ. ನೀವು ಬಳಸುವ ಆ್ಯಪ್‌ಗಳನ್ನು ಅಧಿಕೃತ ತಾಣಗಳಿಂದ ಡೌನ್‌ಲೋಡ್ ಮಾಡಿಕೊಳ್ಳಿ ಎಂದು ಯಶವಂತ್ ತಿಳಿಸಿದರು.
ಬ್ಯಾಂಕ್‌ಗಳಿಗೆ ಸಂಬಂಧಿಸಿದಂತೆ ಯಾರಿಂದಲೂ, ಯಾವುದೇ ಕರೆ ಬಂದರೂ ಪೂರ್ವಾಪರ ವಿಚಾರಿ ಸದೇ ವೈಯಕ್ತಿಕ ವಿವರಗಳನ್ನು ನೀಡಲೇ ಬಾರದು. ಇಂಥ ಕರೆಗಳ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಉತ್ತರಿಸಬೇಕು ಎಂದರು.
ಸೈಬರ್ ಅಪರಾಧದಲ್ಲಿ ಸದ್ಯ ಭಾರತ ವಿಶ್ವದಲ್ಲಿ 10ನೇ ಸ್ಥಾನದಲ್ಲಿದೆ. ರಷ್ಯ ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ ವಾರ್ಷಿಕ 6 ಟ್ರಿಲಿಯನ್ ಯುಎಸ್ ಡಾಲರ್‌ನಷ್ಟು ಸೈಬರ್ ವಂಚನೆಯಾಗುತ್ತಿದೆ. ಇದು ಒಟ್ಟು ಆರ್ಥಿಕತೆಯಲ್ಲಿ ಮೂರನೇ ಸ್ಥಾಾನದಲ್ಲಿದೆ. ಹೀಗಾಗಿ ಸೈಬರ್ ಅಪರಾಧದ ಬಗ್ಗೆೆ ಹೆಚ್ಚು ಜಾಗೃತಿ ಯನ್ನು ಪ್ರತಿಯೊಬ್ಬರೂ ವಹಿಸಲೇಬೇಕು ಎಂದವರು ನುಡಿದರು.
ಶೇ.99ರಷ್ಟು ಸೈಬರ್ ವಂಚನೆಗಳು ‘ಡಾರ್ಕ್ ವೆಬ್’ ಮೂಲಕವೇ ನಡೆಯುತ್ತಿವೆ. ಆದುದರಿಂದ ಅನಾಮ ಧೇಯ ವಿಡಿಯೋಕಾಲ್, ಇ-ಮೇಲ್ ಬಂದ ಸಂದರ್ಭದಲ್ಲಿ ತಕ್ಷಣವೇ ಪ್ರತಿಕ್ರಿಯಿಸಬೇಡಿ ಎಂದು ಯಶವಂತ್ ಎಚ್ಚರಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರತಿಷ್ಠಾನಕ್ಕೆ ಪ್ರತಿದಿನವೂ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೈಬರ್ ಜಾಗೃತಿ ಇಂದಿನ ತುರ್ತು ಅಗತ್ಯವೂ ಆಗಿದೆ ಎಂದರು.
ಕೊನೆಯಲ್ಲಿ ಸುಧೀರ್ಘ ಸಂವಾದವೂ ನಡೆಯಿತು. ವಿಬಿಸಿಎಲ್‌ನ ನಿರ್ದೇಶಕಿ ಪ್ರೊ.(ಡಾ.)ನಿರ್ಮಲಾ ಕುಮಾರಿ ಕೆ. ಉಪಸ್ಥಿತರಿದ್ದರು.