×
Ad

ಲೆಕ್ಕ ಪರಿಶೋಧಕರ ಆಯ್ಕೆ ಪತ್ರ ಸಲ್ಲಿಸಲು ಸೂಚನೆ

Update: 2025-03-13 21:13 IST

ಉಡುಪಿ, ಮಾ.13: ಜಿಲ್ಲೆಯ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ತಮ್ಮ ವಾರ್ಷಿಕ ಮಹಾ ಸಭೆಯಲ್ಲಿ 2024-25ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ಅಥವಾ ಲೆಕ್ಕ ಪರಿಶೋಧನಾ ಫರ್ಮ್‌ನ್ನು ಆಯ್ಕೆ ಮಾಡಿಕೊಂಡ ಮಾಹಿತಿಯನ್ನು ಸಾಮಾನ್ಯ ಸಭೆ ನಡೆದ ಏಳು ದಿನಗಳೊಳಗಾಗಿ ಮುಖ್ಯ ಕಾರ್ಯನಿರ್ವಾಹಕರು ಸಭೆಯ ನಡವಳಿಯ ದೃಡೀಕೃತ ಪ್ರತಿಯನ್ನು ಕಾಯ್ದೆ/ನಿಯಮಾವಳಿಯಂತೆ ಇಲಾಖೆಯ ಕಛೇರಿಗೆ ಸಲ್ಲಿಸಬೇಕಿದೆ.

ಇದುವರೆಗೂ ಮಾಹಿತಿ ಸಲ್ಲಿಸದ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಪ್ರಕಟಣೆ ಪ್ರಕಟವಾದ ಮೂರು ದಿನಗಳ ಒಳಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಛೇರಿ, ಸಿತಾರಾ ಕಾಂಪ್ಲೆಕ್ಸ್, 2ನೇ ಮಹಡಿ, ಹಳೆ ಅಂಚೆಕಛೇರಿ ರಸ್ತೆ, ಉಡುಪಿ ಇಲ್ಲಿಗೆ ಮುದ್ದಾಂ ಆಗಿ ಬಂದು ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಿ ಸ್ವೀಕೃತಿ ಪಡೆದು ಕೊಳ್ಳಬಹುದು.

ನಿಗದಿಪಡಿಸಿದ ಅವಧಿಯೊಳಗೆ ಆಯ್ಕೆ ಮಾಹಿತಿ ಸಲ್ಲಿಸದೇ ಇರುವ ಸಹಕಾರ ಸಂಘಗಳು/ ಸೌಹಾರ್ದ ಸಹಕಾರಿಗಳ 2024-25ನೇ ಸಾಲಿನ ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿ ಕೊಂಡಿಲ್ಲವೆಂದು ಪರಿಗಣಿಸಿ, ಅಂತಹ ಸಹಕಾರ ಸಂಘಗಳ ಲೆಕ್ಕಪರಿಶೋಧನೆಗೆ ಕಾಯ್ದೆಯ ಅವಕಾಶ ದಂತೆ ಇಲಾಖೆಯು ನಿರ್ವಹಿಸುವ ಲೆಕ್ಕಪರಿಶೋಧಕರ ಪ್ಯಾನಲ್ ನಿಂದ ಅರ್ಹ ಲೆಕ್ಕಪರಿಶೋಧಕ ಅಥವಾ ಫರ್ಮನ್ನು ಲೆಕ್ಕಪರಿಶೋಧನಾ ಕಾರ್ಯಕ್ಕೆ ನೇಮಿಸಿ ಆದೇಶಿಸಲಾಗುವುದು ಮತ್ತು ಅಂತಹ ಆದೇಶವೇ ಅಂತಿಮವಾಗಿರುತ್ತದೆ ಎಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News