×
Ad

ಆರ್.ಮನೋಹರ್ ಆವಿಷ್ಕರಿಸಿದ ದೂರದರ್ಶಕ ಉದ್ಘಾಟನೆ

Update: 2025-03-15 18:01 IST

ಉಡುಪಿ, ಮಾ.15: ಸಂಶೋಧಕ ಆರ್.ಮನೋಹರ್ ಆವಿಷ್ಕಾರ ಮಾಡಿದ ದೂರದರ್ಶಕಕ್ಕೆ ಕ್ಯಾಮರ ಅಳವಡಿಸಿದ ಹೊಸ ಸಿಸ್ಟಮ್‌ನ್ನು ಆತ್ರಾಡಿ ಶಾಂಭವಿ ಹೋಟೆಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಉಡುಪಿ ನಗರ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು ಶನಿವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಉಪ್ಪೂರು ಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಶಾಂತ್ ಸುವರ್ಣ, ಉದಯ ಆಚಾರಿ ಹೇರೂರು, ಉದ್ಯಮಿ ಅಪ್ಪುಮರಕಾಲ, ಸೆಲಿನ್ ಅಪ್ಪು, ಏಂಜೆಲಾ ಮರಕಾಲ, ಕುಸುಮ ಕೆ.ಕುಂದರ್ ಆತ್ರಾಡಿ, ದೇವಿಪ್ರಸಾದ್ ಆಚಾರ್ಯ, ಆದರ್ಶ ಶೆಟ್ಟಿಗಾರ್ ಕೆಳಪರ್ಕಳ, ರಾಜ್ ಪ್ರಸಾದ್ ಆಚಾರ್ಯ, ಗಣೇಶ್ ನಾಯಕ್ ಪರ್ಕಳ, ಕಾರ್ತಿಕ್ ಕೋಟ್ಯಾನ್ ಕಾರ್ತಿಕ್ ಕುಲಾಲ್, ದಿಶಾ, ವಿನುತ, ಪ್ರಭಾ ಸಾಲಿಯನ್ ಬೆಳ್ಳಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೂರದರ್ಶಕ ಮತ್ತು ಆವಿಸ್ಕರಿಸಿದ ದೂರದರ್ಶಕದ ಕ್ಯಾಮರದ ಮೂಲಕ ಹೋಳಿ ಹುಣ್ಣಿಮೆಯ ಪೂರ್ಣ ಚಂದ್ರನ ದರ್ಶನದ ಜೊತೆಗೆ ಚಂದ್ರನಲ್ಲಿರುವ ಕುಳಿಗಳ(ಹೊಂಡ) ಚಿತ್ರವನ್ನು ಸೆರೆ ಹಿಡಿಯ ಲಾಯಿತು. ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳೆಬೆಟ್ಟು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News