×
Ad

ಸಾಲಿಗ್ರಾಮ ಪ.ಪಂ.: ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ

Update: 2025-03-21 21:15 IST

ಉಡುಪಿ, ಮಾ.21:ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಎಲ್ಲಾ ಉದ್ಯಮದಾರರ 2025-26ನೇ ಸಾಲಿನ ಉದ್ಯಮ ಪರವಾನಿಗೆ ನವೀಕರಣ ಅವಧಿ ಎಪ್ರಿಲ್ ತಿಂಗಳಿನಿಂದ ಪ್ರಾರಂಭವಾಗಲಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯಮ ನಡೆಸುತ್ತಿರುವ ಉದ್ದಿಮೆದಾರರು ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ನಿಗದಿತ ದಾಖಲೆ ಸಹಿತ ಆನ್‌ಲೈನ್ ತಂತ್ರಾಂಶದ ಮೂಲಕ ಅಥವಾ ಪಟ್ಟಣ ಪಂಚಾಯತ್‌ಗೆ ಅರ್ಜಿ ನಮೂನೆ ಸಹಿತ ನಿಗದಿತ ದಾಖಲೆ ಸಲ್ಲಿಸಿ ಉದ್ಯಮ ಪರವಾನಿಗೆ ನವೀಕರಿಸಿಕೊಳ್ಳಬಹುದು.

ನಿಗದಿತ ಅವಧಿಯಲ್ಲಿ ಉದ್ಯಮ ಪರವಾನಿಗೆ ನವೀಕರಿಸದಿದ್ದಲ್ಲಿ ಅಧಿಸೂಚನೆಯಂತೆ ನಿಗದಿತ ದಂಡ ಸಹಿತ ಬಾಕಿ ಶುಲ್ಕ ಪಾವತಿಸಬೇಕು. ಈಗಾಗಲೇ ಉದ್ಯಮ ಸ್ಥಗಿತಗೊಳಿಸಿದ್ದಲ್ಲಿ ಪಟ್ಟಣ ಪಂಚಾಯತ್‌ಗೆ ಲಿಖಿತ ವಾಗಿ ಅರ್ಜಿ ಸಲ್ಲಿಸಿ, ದಂಡನೆ ಸಹಿತ ಬಾಕಿ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆಯನ್ನು ರದ್ದುಪಡಿಸಿಕೊಳ್ಳಬೇಕು. ತಪ್ಪಿದ್ದಲ್ಲಿ ಈ ಉದ್ದಿಮೆದಾರರನ್ನು ಪ್ರತಿವರ್ಷ ಬಾಕಿದಾರರೆಂದು ಪರಿಗಣಿಸಿ ಕಾನೂನು ರೀತ್ಯಾ ದಂಡ ಸಹಿತ ಬಾಕಿ ಶುಲ್ಕ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಉದ್ಯಮ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದಲ್ಲಿ ತಕ್ಷಣವೇ ನಿಗದಿತ ದಾಖಲೆ ಸಹಿತ ಆನ್‌ಲೈನ್ ತಂತ್ರಾಂಶದ ಮೂಲಕ ಅಥವಾ ಪಟ್ಟಣ ಪಂಚಾಯತ್ ಕಚೇರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಿ ನಿಗದಿತ ದಾಖಲೆ ನೀಡಿ ಉದ್ಯಮ ಪರವಾನಿಗೆಯನ್ನು ಪಡೆದು ಕೊಳ್ಳಬೇಕು.

ಬೀದಿ ಬದಿ ವ್ಯಾಪಾರಸ್ಥರು, ಗೂಡಂಗಡಿದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ವ್ಯಾಪಾರ ಸ್ಥರು, ಉದ್ಯಮ ಪರವಾನಿಗೆ ಪಡೆಯದೇ ಉದ್ಯಮ ನಡೆಸುತ್ತಿದ್ದಲ್ಲಿ ಪಟ್ಟಣ ಪಂಚಾಯತ್ ಕಚೇರಿಗೆ ನಿಗದಿತ ಘನ ತ್ಯಾಜ್ಯ ಹಾಗೂ ಉದ್ಯಮ ಶುಲ್ಕವನ್ನು ಪಾವತಿಸಬೇಕು. ತಂಬಾಕು ಉತ್ಪನ್ನಗಳ ಮಾರಾಟಗಾರರು ನಿಗದಿತ ಶುಲ್ಕ ಪಾವತಿಸಿ ಕಡ್ಡಾಯವಾಗಿ ಆನ್‌ಲೈನ್ ತಂತ್ರಾಂಶದ ಮೂಲಕ ತಂಬಾಕು ಪರವಾನಿಗೆ ಪಡೆಯುವಂತೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News