ರಸ್ತೆ ಬದಿಯ ಚರಂಡಿಗೆ ಬಿದ್ದ ಬೈಕ್: ಸವಾರ ಮೃತ್ಯು
Update: 2025-03-21 22:04 IST
ಶಂಕರನಾರಾಯಣ: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಗ ಪರಿಣಾಮ ಸವಾರ ಮೃತಪಟ್ಟ ಘಟನೆ ಆಜ್ರಿ ಗ್ರಾಮದ ತಾರೆಕೊಡ್ಲು ಎಂಬಲ್ಲಿ ಮಾ.20ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು 74ನೇ ಉಳ್ಳೂರು ನಿವಾಸಿ ಚಂದ್ರಶೇಖರ(56) ಎಂದು ಗುರುತಿಸಲಾಗಿದೆ. ಇವರು ಹಳ್ಳಿಹೊಳೆ ಗ್ರಾಮದ ತೋಟದಲ್ಲಿರುವ ವಿಳ್ಯದ ಎಲೆಯನ್ನು ಕೊಯ್ದು ನಂತರ ವಾಪಾಸ್ಸು ಮನೆಗೆ ಸಿದ್ದಾಪುರ ಹಳ್ಳಿ ಹೊಳೆ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದು, ಈ ವೇಳೆ ಹತೋಟಿ ತಪ್ಪಿದ ಬೈಕ್, ರಸ್ತೆ ಬದಿ ಚರಂಡಿಗೆ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.