ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಕಳವು
Update: 2025-03-21 22:05 IST
ಶಿರ್ವ, ಮಾ.21: ಕೋಡುಗುಡ್ಡೆ ಕೋಡು ಶ್ರೀದುರ್ಗಾಂಬಿಕಾ ಅಂಗನವಾಡಿಗೆ ಮಾ.20ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಅಂಗನವಾಡಿ ಕೇಂದ್ರದ ಕೌಂಪೌಂಡ್ ವಾಲ್ ಗೇಟ್ ಬೀಗ ಮತ್ತು ಮುಖ್ಯ ದ್ವಾರದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಸ್ಟೋರ್ ರೂಮಿನಲ್ಲಿದ್ದ ಗ್ಯಾಸ್ ಅಂಡೆ, ಅಡುಗೆ ಸಿದ್ದ ಪಡಿಸುವ ಸಾಮಗ್ರಿಗಳು ಮತ್ತು ಆಹಾರ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಮೌಲ್ಯ 6,800ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.