×
Ad

ಸಮಾಜದಲ್ಲಿ ನರ್ಸ್‌ಗಳಿಗೆ ವಿಶೇಷ ಜವಾಬ್ದಾರಿ: ಸರ್ಜನ್ ಡಾ.ಅಶೋಕ್

Update: 2025-04-13 21:25 IST

ಉಡುಪಿ: ಉಡುಪಿಯ ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ (ಎಲ್‌ಎಂಹೆಚ್) ಸಮೂಹ ಸಂಸ್ಥೆಯ ಪದವಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ದಿನಾಚರಣೆಯ ಎಲ್‌ಎಂಹೆಚ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಮಾತನಾಡಿ, ಪ್ರತಿಯೊಬ್ಬರೂ ವೈದ್ಯರ ಕೆಲಸವನ್ನು ಗುರುತಿಸುತ್ತಾರೆ, ಆದರೆ ಯಾರೂ ನರ್ಸಿಂಗ್ ಕೆಲಸವನ್ನು ಗುರುತಿ ಸುವುದಿಲ್ಲ. ದಾದಿಯರು ವೈದ್ಯರಿಗಿಂತ ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಆದ್ದರಿಂದ ಸಮಾಜದಲ್ಲಿ ನರ್ಸ್‌ಗಳಿಗೆ ವಿಶೇಷ ಜವಾಬ್ದಾರಿ ಇದ್ದು, ವೈದ್ಯರ ಸಲಹೆ ಸೂಚನೆ ಪಾಲಿಸಬೇಕು ಎಂದರು

ಸಿಎಸ್‌ಐ ಕೆಎಸ್‌ಡಿಯ ಬಿಷಪ್ ಹೇಮಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಬದ್ಧತೆಯನ್ನು ಹೊಂದಿರ ಬೇಕು. ಬದ್ಧತೆಯ ಜೊತೆಗೆ, ತಾಳ್ಮೆಯೂ ಮುಖ್ಯವಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆ ಗಳೊಂದಿಗೆ ನಿಮ್ಮ ಬಳಿಗೆ ಬರುತ್ತಾರೆ. ದೇವರ ನಂತರ, ಜನರು ವೈದ್ಯರು ಮತ್ತು ದಾದಿಯರ ಮೇಲೆ ನಂಬಿಕೆ ಇಡುತ್ತಾರೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಲೊಂಬರ್ಡ್ ಮೆಮೋರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಾರ್ಷಿಕ ನಿಯತಕಾಲಿಕವನ್ನು ಬಿಡುಗಡೆ ಮಾಡಲಾ ಯಿತು. ಘಟಿಕೋತ್ಸವ ಸಮಾರಂಭವು ಪದವಿ ಪ್ರದಾನ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು,

ಈ ಸಂದರ್ಭದಲ್ಲಿ ಪ್ರಾಂಶುಪಾಲೆ ವೀಣಾ ಮೆನೆಜಸ್, ಎಲ್‌ಎಂಎ ಎಚ್‌ಎಸ್‌ನ ಪ್ರಾಂಶುಪಾಲ ಡಾ.ರೋಶನ್ ಪೈ, ಪದವೀಧರರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News