×
Ad

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ

Update: 2025-04-17 19:16 IST

ಉಡುಪಿ, ಎ.17: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನ ಅಡ್ಯಾರ್‌ನಲ್ಲಿ ಎ.18ರಂದು ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಸರ್ವರೂ ಭಾಗವಹಿಸುವಂತೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕರೆ ನೀಡಿದೆ.

ವಕ್ಫ್ ಸೊತ್ತು ಯಾವತ್ತೂ ಇತರರ ಸೊತ್ತಲ್ಲ. ಸರಕಾರದ ಸೊತ್ತು ಕೂಡ ಅಲ್ಲ. ಸರಕಾರವೋ ಇತರರೋ ಅದರಲ್ಲಿ ಹಸ್ತಕ್ಷೇಪ ಸಲ್ಲಿಸುವಂತಿಲ್ಲ. ಆ ಸೊತ್ತು ಗಳೆಲ್ಲವೂ ಅಲ್ಲಾಹನ ಮಾರ್ಗದಲ್ಲಿ ಮೀಸಲಿಟ್ಟದ್ದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು ಜಾರಿಗೆ ತಂದ ವಕ್ಷೆ ತಿದ್ದುಪಡಿ ಮಸೂದೆಯ ವಿರುದ್ದ ಕರ್ನಾಟಕ ಉಲಮಾ ಕೋರ್ಡಿನೇಶನ್ ವತಿಯಿಂದ ಉಭಯ ಖಾಝಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು ಉಡುಪಿ ಜಿಲ್ಲೆಯ ಎಲ್ಲಾ ಸದಸ್ಯರು ಕಾರ್ಯಕರ್ತರು, ಹಿತೈಷಿಗಳು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನಾ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ವಂತೆ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News