×
Ad

ಬಿಲ್ಲವ ಕ್ರಿಕೆಟ್ ಪಂದ್ಯಾಟ: ಮಟಪಾಡಿ ಜತ್ತನ್ ಪೂಜಾರಿ ಫ್ರೆಂಡ್ಸ್‌ಗೆ ಟ್ರೋಫಿ

Update: 2025-04-17 19:21 IST

ಬ್ರಹ್ಮಾವರ: ಬಿಲ್ಲವ ಫ್ರೆಂಡ್ಸ್ ಮಟಪಾಡಿ ನೀಲಾವರ ಆಶ್ರಯದಲ್ಲಿ ನಡೆದ 6 ತಂಡಗಳ ಬಿಲ್ಲವ ಕ್ರಿಕೆಟ್ ಪಂದ್ಯಾಟ ಮಟಪಾಡಿ ಬಿಲ್ಲವ ಟ್ರೋಫಿ 2025 ಟ್ರೋಫಿಯನ್ನು ಜತ್ತನ್ ಪೂಜಾರಿ ಫ್ರೆಂಡ್ಸ್ ತನ್ನದಾಗಿಸಿ ಕೊಂಡಿತು. ಶ್ರೀಕೋಟಿ ಚೆನ್ನಯ್ಯ ಬ್ರದರ್ಸ್ ಚಾಂತಾರು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆಯಿತು.

ಚಾಂತಾರಿನ ಗ್ಲೋಬಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟವನ್ನು ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಉದ್ಘಾಟಿಸಿ ದರು. ಪಂದ್ಯಾಟದಲ್ಲಿ 6 ತಂಡಗಳು ಭಾಗವಹಿಸಿದ್ದು, ಸರಣಿ ಶ್ರೇಷ್ಠ ಮಹೇಶ್ ಅಂಚನ್, ಪಂದ್ಯ ಶ್ರೇಷ್ಠ ವೈಭವ್ ಪೂಜಾರಿ, ಉತ್ತಮ ದಾಂಡಿಗನಾಗಿ ಅಕ್ಷಯ ಪೂಜಾರಿ, ಉತ್ತಮ ಎಸೆತಗಾರರಾಗಿ ನಿಖಿಲ್ ಪೂಜಾರಿ, ಉತ್ತಮ ಕ್ಷೇತ್ರ ರಕ್ಷಕರಾಗಿ ಮಹೇಶ್ ಪೂಜಾರಿ, ಉತ್ತಮ ಗೂಟ ರಕ್ಷಕರಾಗಿ ಸಂದೇಶ್ ಪೂಜಾರಿ ಪಡೆದರು.

ಉತ್ತಮ ಶಿಸ್ತುಬದ್ಧ ತಂಡವಾಗಿ ಬಲ್ಜಿ ಬಿಲ್ಲವಾಸ್ ಫ್ರೆಂಡ್ಸ್ ಪಡೆಯಿತು. ಪಂದ್ಯಾಟದ ಮೂರನೇ ಸ್ಥಾನವನ್ನು ಅವಳಿ ವೀರರು ಶ್ರೀಮಾರಿಗುಡಿ ಫ್ರೆಂಡ್ಸ್ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಅನಾರೋಗ್ಯ ಪೀಡಿತ ದಿನೇಶ್ ಪೂಜಾರಿ ಅವರಿಗೆ ಆರ್ಥಿಕ ಸಹಾಯ ಮಾಡಲಾಯಿತು. ನಿರೂಪಣೆಗಾರ ಚೇತನ್ ಜಿ.ಪೂಜಾರಿ ಮತ್ತು ಕ್ರೀಡಾರಂಗದ ಸಾಧಕ ಸುಹಾನ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಪಂದ್ಯಾಟದ ಪ್ರಯುಕ್ತ ಆಯೋಜಿಸಿದ್ದ ಲಕ್ಕಿಡಿಪ್ ಕೂಪನ್ ಡ್ರಾ ನಡೆಸಲಾಯಿತು.

ವೇದಿಕೆಯಲ್ಲಿ ಉಮೇಶ್ ಪೂಜಾರಿ ಚಾಂತಾರು, ಜಯಶೀಲ ಪೂಜಾರಿ, ಸುರೇಶ್ ಪೂಜಾರಿ, ಅಶೋಕ್ ಪೂಜಾರಿ, ಶ್ರೀಧರ್ ಪೂಜಾರಿ, ಸತೀಶ್ ಪೂಜಾರಿ ಉಗ್ಗೆಲ್‌ಬೆಟ್ಟು, ನಿತ್ಯಾನಂದ ಪೂಜಾರಿ ಚಾಂತಾರು, ದೀಪಕ್ ಪೂಜಾರಿ, ಮಿಥುನ್ ಅಮೀನ್ ಮಟಪಾಡಿ, ಸುಭಾಶ್ ಜತ್ತನ್, ಮುದ್ದು ಜತ್ತನ್ ತಂಡಗಳ ಮಾಲಕರಾದ ಉಮೇಶ್ ಪೂಜಾರಿ, ಅಶೋಕ್ ಪೂಜಾರಿ ಮಟಪಾಡಿ, ಸುರೇಶ್ ಎನ್.ಕರ್ಕೆರಾ, ಪವಿತ್ರ್ ಕುಮಾರ್, ದೀಪು ಚಾಂತಾರ್, ಪ್ರತಾಪ್ ಪೂಜಾರಿ, ಮತ್ತು ಸಂಘಟಕರಾದ ಸಂದೇಶ್ ಪೂಜಾರಿ, ಗಣೇಶ್ ಪೂಜಾರಿ, ಸಚಿನ್ ಪೂಜಾರಿ, ಶ್ರಪೀಕಾಂತ್ ಪೂಜಾರಿ, ಧೀರಜ್ ಪೂಜಾರಿ, ರಂಜನ್ ಪೂಜಾರಿ ಉಪಸ್ಥೀತರಿದ್ದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News