×
Ad

ಕುಂದಾಪುರದಲ್ಲಿ ಪಾಸ್ಖ ಹಬ್ಬ ಆಚರಣೆ

Update: 2025-04-20 19:39 IST

ಕುಂದಾಪುರ, ಎ.20: ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಎ.19 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಚರ್ಚ್‌ನ ಮೈದಾನದ ಕತ್ತಲಿನಲ್ಲಿ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು ನಡೆದವು. ಏಸು ಪುನರುತ್ಥಾನ ಹೊಂದಿದ ಧಾರ್ಮಿಕ ವಿದಿಯನ್ನು ಆಚರಿಸಲಾಯಿತು.

ಬ್ರಹ್ಮಾವರ ಹೋಲಿ ಫೆಮಿಲಿ ಚರ್ಚಿನ ಧರ್ಮಗುರು ವಂ.ನೆಲ್ಸನ್ ಲೋಬೊ ಪಾಸ್ಕ ಹಬ್ಬದ ದಿವ್ಯ ಬಲಿದಾನ ವನ್ನು ಅರ್ಪಿಸಿ ನಾವು ಯೇಸು ಕ್ರಿಸ್ತರು ನಮ್ಮಗೆ ತಿಳಿಸಿದ ಮಾರ್ಗದಲ್ಲಿ ಜೀವಿಸಬೇಕು’ ಎಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಜಲವನ್ನು ಪವಿತ್ರೀಕರಿಸಲಾಯಿತು. ಚರ್ಚಿನ ಧರ್ಮಗುರು ಅ ವಂ.ಪೌಲ್ ರೇಗೊ ಫಾಸ್ಕ ಹಬ್ಬದ ಧಾರ್ಮಿಕ ಕ್ರಿಯೆಗಳಲ್ಲಿ ಸಹಕರಿಸಿ ಬಲಿದಾನದಲ್ಲಿ ಭಾಗಿಯಾದರು.

ಪವಿತ್ರ ಹಬ್ಬದ ಆಚರಣೆಯಲ್ಲಿ ಚರ್ಚ್ ಪಾಲನಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ನಾ, ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ ಮತ್ತು ಧರ್ಮಭಗಿನಿಯರು, ಗುರಿಕಾರರು, ಪಾಲನಮಂಡಳಿ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳಿಗೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News