ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ರಾಮ್ ಅಜೆಕಾರ್ ಆಯ್ಕೆ
Update: 2025-04-21 20:55 IST
ಉಡುಪಿ: ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾ ಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಕನ್ನಡಪ್ರಭ ವರದಿಗಾರ ರಾಮ್ ಅಜೆಕಾರ್ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ? ಶೀರ್ಷಿಕೆ ಯಡಿ ಪ್ರಕಟವಾದ ರಾಮ ಅಜೆಕಾರ್ ಅವರ ಸುದ್ದಿಗೆ ಹಿರಿಯ ಉದ್ಯಮಿ ಅಶ್ರಫ್ ಷಾ ಮಂತೂರು ಅವರ ದತ್ತಿನಿಧಿಯಿಂದ ನೀಡಲಾಗುವ ಈ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ ೩ರಂದು ಸೀತಾಂಗೋಳಿಯ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.