×
Ad

ಕೋಳಿ ಅಂಕಕ್ಕೆ ದಾಳಿ: ಸೊತ್ತು ವಶ

Update: 2025-04-21 21:47 IST

ಮಲ್ಪೆ, ಎ.21: ಕಿದಿಯೂರು ಗ್ರಾಮದ ಕಪ್ಪೆಟ್ಟು ಬ್ರಹ್ಮ ಬೈದರ್ಕಳ ಗರಡಿಯ ಬಳಿ ಎ.20ರಂದು ಮಧ್ಯಾಹ್ನ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಮಲ್ಪೆ ಪೊಲೀಸಸರು ದಾಳಿ ನಡೆಸಿದಾಗ ಶರತ್, ಸಂದೇಶ, ಜಯಕರ, ರಮೇಶ, ಅರುಣ ಕುಮಾರ್ ಸೇರಿದಂತೆ ಕೆಲವು ಮಂದಿ ಓಡಿ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ 2,200ರೂ. ನಗದು, 10ಸಾವಿರ ರೂ. ಮೌಲ್ಯದ 10 ಹುಂಜ ಕೋಳಿ, ಕೋಳಿಯ ಕಾಲಿಗೆ ಕಟ್ಟಿದ ಎರಡು ಕತ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News