ಬಾವಿಯ ಮಣ್ಣು ಕುಸಿದು ಕಾರ್ಮಿಕ ಮೃತ್ಯು
Update: 2025-04-22 21:34 IST
ಬೈಂದೂರು, ಎ.22: ಬಾವಿ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಶಿರೂರು ಗ್ರಾಮದ ದೊಂಬೆ ಕೆಳಪೇಟೆ ಎಂಬಲ್ಲಿ ಎ.21ರಂದು ನಡೆದಿದೆ.
ಮೃತರನ್ನು ಬಿಜೂರು ಗ್ರಾಮದ ಸಂತೋಷ(26) ಎಂದು ಗುರುತಿಸಲಾಗಿದೆ. ಇವರು ಇತರರೊಂದಿಗೆ ವಿಠಲ ದೇವಾಡಿಗ ಎಂಬವರ ಮನೆಯ ಬಾವಿಯ ಒಳಗಡೆ ಮಣ್ಣು ತುಂಬುವ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಬಾವಿಯ ಮಣ್ಣು ಆಕಸ್ಮಿಕವಾಗಿ ಕುಸಿದು ಸಂತೋಷ್ ತೀವ್ರವಾಗಿ ಅಸ್ವಸ್ಥಗೊಂಡಿದ್ದರೆನ್ನಲಾಗಿದೆ. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ದಾಖಲಾಗಿದ್ದ ಇವರು, ಚಿಕಿತ್ಸೆ ಫಲಕಾರಿ ಯಾಗದೆ ಸಂಜೆ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.