×
Ad

ಎಸೆಸೆಲ್ಸಿ ಪರೀಕ್ಷೆ: ರಾಜ್ಯಕ್ಕೆ ಟಾಪರ್ ಕಾರ್ಕಳದ ಸ್ವಸ್ತಿ ಕಾಮತ್‌ಗೆ ವೈದ್ಯಳಾಗುವ ಗುರಿ

Update: 2025-05-02 20:54 IST

ಕಾರ್ಕಳ, ಮೇ 2: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದು, ಅದರಲ್ಲಿ ಸ್ಬಸ್ತಿ ಕಾಮತ್ ಒಬ್ಬಳಾಗಿ ದ್ದಾರೆ. ಇವರು ಪಳ್ಳಿ ಗ್ರಾಮದ ಜನಾರ್ದನ್ ಕಾಮತ್ ಹಾಗೂ ಶಾಂತಿ ಕಾಮತ್ ದಂಪತಿ ಪುತ್ರಿ.

ಜನಾರ್ದನ್ ಕಾಮತ್ ಹೊಟೇಲ್ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸು ತ್ತಿದ್ದರೆ, ಶಾಂತಿ ಕಾಮತ್ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ತಂದೆಯ ಹುಟ್ಟುಹಬ್ಬದ ದಿನದಂದೆ ಪುತ್ರಿ ಸ್ವಸ್ತಿ ಕಾಮತ್ ಶೈಕ್ಷಣಿಕ ಸಾಧನೆಯ ಉಡುಗೊರೆ ನೀಡಿದ್ದಾರೆ.

‘ಅಂದಿನ ಪಾಠವನ್ನು ಅಂದೇ ಓದಿ, ಪುನರ್ ಮನನ ಮಾಡಿಕೊಳ್ಳುತ್ತಿದ್ದೆ. ಕೇವಲ ಪರೀಕ್ಷೆ ಸಮಯ ಬರುವಾಗ ಮಾತ್ರ ನಿದ್ದೆ ಬಿಟ್ಟು ಸತತವಾಗಿ ಓದು ತ್ತಿರಲಿಲ್ಲ. ಯಾವುದೇ ಟ್ಯೂಷನ್‌ಗೆ ಹೋಗದೆ ಮನೆಯ ಲ್ಲಿಯೇ ಓದಿಗೆ ಹೆಚ್ಚು ಸಮಯ ನೀಡುತ್ತಿದ್ದೆ. ಇದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ತಂದೆ ತಾಯಿ ಹಾಗೂ ಶಿಕ್ಷಕರು ನನಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ನಾನು ಪಿಯುಸಿಯಲ್ಲಿ ಪಿಸಿಎಂಬಿ ಪಡೆದು ವೈದ್ಯನಾಗುವ ಗುರಿ ಹೊಂದಿದ್ದೇನೆ’ ಎಂದು ಸ್ವಸ್ತಿ ಕಾಮತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News