×
Ad

ದೇಶದ ಜನರ ಭದ್ರತೆಗೆ ಸರಕಾರ ಆದ್ಯತೆ ನೀಡಬೇಕು: ವಿನಯ್ ಕುಮಾರ್ ಸೊರಕೆ

Update: 2025-05-04 20:04 IST

ಉಡುಪಿ, ಮೇ 4: ಜಾತಿ, ಧರ್ಮ, ಆಕ್ರೋಶಗಳಿಕ್ಕಿಂತ ಮುಖ್ಯವಾದುದು ದೇಶದ ಜನರ ರಕ್ಷಣೆ. ಪಹಲ್ ಗಾಮ್ ಹತ್ಯಾಕಾಂಡವು ಕೇಂದ್ರ ಸರಕಾರದ ವೈಫಲ್ಯವೆಂದು ತಿಳಿಯಬಹುದಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.

ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೇವಲ ಭಾಷಣ ಮಾಡಿ ಪ್ರಯೋಜನವಿಲ್ಲ, ಕಾರ್ಯ ಸಾಧನೆ ಆಗಬೇಕಾಗಿದೆ. ಕಾರ್ಯಕರ್ತರ ಬೇಡಿಕೆ ಪೂರೈಸಲು ಪಕ್ಷ ಗಮನಹರಿಸಬೇಕೆಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಮೇ 6ರಂದು ಬೈಂದೂರಿನಲ್ಲಿ ನಡೆಯುವ ಜೈ ಗಾಂಧಿ, ಜೈ ಭೀಮ್, ಜೈ ಸಂವಿಧಾನ ಸಮಾವೇಶವನ್ನು ಎಲ್ಲರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಪ್ರಮುಖರಾದ ಎಂ.ಎ.ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ್ ಶೆಟ್ಟಿ, ದಿನೇಶ್ ಪುತ್ರನ್, ರಮೇಶ್ ಕಾಂಚನ್, ಹರಿಪ್ರಸಾದ್ ಶೆಟ್ಟಿ, ಗೋಪಿನಾಥ್ ಭಟ್, ಸಂತೋಷ್ ಕುಲಾಲ್, ವೈ.ಸುಕುಮಾರ್, ಮಹಾಬಲ ಕುಂದರ್, ನರಸಿಂಹಮೂರ್ತಿ, ಶರ್ಪುದ್ದೀನ್, ಅಶೋಕ ಎ.ಎರ್ಮಾಳ್, ಹರೀಶ್ ಕಿಣಿ, ಶಬೀರ್ ಅಹಮದ್, ಸೌರಭ್ ಬಲ್ಲಾಳ್, ಜಯಕುಮಾರ್, ಪ್ರತ್ಯಾತ್ ಶೆಟ್ಟಿ, ಪ್ರಶಾಂತ್ ಜತ್ತನ್, ರೋಶನ್ ಶೆಟ್ಟಿ, ನಾಗೇಶ್ ಕುಮಾರ್ ಉದ್ಯಾವರ, ಭುಜಂಗ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ದಿಲೀಪ್ ಹೆಗ್ಡೆ, ಜ್ಯೋತಿ ಹೆಬ್ಬಾರ್, ಕಿರಣ್ ಹೆಗಡೆ, ಹಿರಿಯಣ್ಣ ಶೆಟ್ಟಿ, ಇಸ್ಮಾಯಿಲ್ ಆತ್ರಾಡಿ, ಹರೀಶ್ ಶೆಟ್ಟಿ ಪಾಂಗಳ, ಮುರಳಿ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಸಂತೋಷ್ ಕುಮಾರ್ ಹಕ್ಲಾಡಿ, ಸಂಧ್ಯಾ ತಿಲಕ್ ರಾಜ್, ಲೂಯಿಸ್ ಲೋಬೊ, ಸುಕನ್ಯಾ ಪೂಜಾರಿ, ಸಜ್ಜನ್ ಶೆಟ್ಟಿ, ಆನಂದ ಪೂಜಾರಿ, ರಮೇಶ್ ಶೆಟ್ಟಿ, ಕೀರ್ತಿ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಳೆದ ಅವಧಿಯಲ್ಲಿ ಅಗಲಿದ ಕಾಂಗ್ರೆಸ್ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಕೆ.ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ವರೋನಿಕ ಕರ್ನೆಲಿಯೋ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News