ಎಸೆಸೆಲ್ಸಿ ಪರೀಕ್ಷೆ: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಸುಶ್ಮಿತಾಗೆ ಗಾಣಿಗ ಸಮಾಜದಿಂದ ಅಭಿನಂದನೆ
ಗಂಗೊಳ್ಳಿ, ಮೇ 5: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ 2ನೇ ರ್ಯಾಂಕ್ ಪಡೆದಿರುವ ಗಂಗೊಳ್ಳಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಎಸ್.ಗಾಣಿಗ ಅವರನ್ನು ನಾಯಕವಾಡಿ-ಗುಜ್ಜಾಡಿ ಗಾಣಿಗ ಸಮಾಜ ಬಾಂಧವರ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗಾಣಿಗ ಸಮಾಜದ ಮುಖಂಡರಾದ ನಾರಾಯಣ ಗಾಣಿಗ ಮೇಲಂಡಿ, ಸೀತಾರಾಮ ಗಾಣಿಗ ಗಂಗೊಳ್ಳಿ, ಪ್ರಮೋದ ಗಾಣಿಗ ಗಂಗೊಳ್ಳಿ, ಗುರುರಾಜ್ ಗಾಣಿಗ ಗುಜ್ಜಾಡಿ, ಸನತ್ ಗಾಣಿಗ, ಸುುತ್ ಗಾಣಿಗ, ನಿತಿನ್ ಗಾಣಿಗ, ಉದಯ ಗಾಣಿಗ ಗಂಗೊಳ್ಳಿ, ಗಂಗಾಧರ ಗಾಣಿಗ ಗಂಗೊಳ್ಳಿ ಮತ್ತು ಗೋವಿಂದ ಗಾಣಿಗ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್‌ನಿಂದ ಸನ್ಮಾನ: ಇದೇ ವೇಳೆ ರೋಟರಿ ಕ್ಲಬ್ ಗಂಗೊಳ್ಳಿ ಸಹ ರ್ಯಾಂಕ್ ವಿಜೇತೆ ಸುಶ್ಮಿತಾ ರನ್ನು ಅವರ ಮನೆಯಲ್ಲೇ ಸನ್ಮಾನಿಸಿತು. ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷೆ ಚಂದ್ರಕಲಾ ತಾಂಡೇಲ, ನಿಯೋಜಿತ ಅಧ್ಯಕ್ಷ ಕೃಷ್ಣ ಪೂಜಾರಿ, ಮಾಜಿ ಅಧ್ಯಕ್ಷರಾದ ಜನಾರ್ದನ ಪೂಜಾರಿ, ವಾಸುದೇವ ಶೇರು ಗಾರ್, ದಯಾನಂದ ಗಾಣಿಗ, ನಾರಾಯಣ ಇ.ನಾಯ್ಕ್, ಬಿ.ಲಕ್ಷ್ಮೀಕಾಂತ ಮಡಿವಾಳ, ಗಂಗೊಳ್ಳಿ ಗ್ರಾಪಂ ಸದಸ್ಯೆ ಮಮತಾ ಎಸ್. ಗಾಣಿಗ, ಶಿವಾನಂದ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.