×
Ad

ಜುಗಾರಿ: ಐವರ ಬಂಧನ

Update: 2025-05-05 22:04 IST

ಕುಂದಾಪುರ: ಕುಂದಾಪುರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಂಜಾ ನಾಯ್ಕ್ ಅವರು ಮೇ4ರಂದು ರೌಂಡ್ಸ್‌ನಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಪಂಚಗಂಗಾವಳಿ ಹೊಳೆಯ ಕುದ್ರುವಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.

ದಯಾನಂದ, ಅಣ್ಣಯ್ಯ, ರವೀಂದ್ರ, ಮೊಮಿನ್ ಮೊಹಮ್ಮದ್ ಜಮೀಲ್, ಜಯರಾಮ್ ಆರೋಪಿಗಳಾಗಿದ್ದು, ಇವರಿಂದ ಆಟಕ್ಕೆ ಬಳಸಿದ ಪರಿಕರ ಹಾಗೂ 1620 ರೂ.ನಗದನ್ನು ವಶಕ್ಕೆ ಪಡೆದಿದ್ದಾರೆ. ನಾರಾಯಣ ಹಾಗೂ ಇನ್ನೂ ಕೆಲವರು ದಾಳಿಯ ವೇಳೆ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News