ಐಪಿಎಲ್ ಬೆಟ್ಟಿಂಗ್: ಓರ್ವ ವಶಕ್ಕೆ
Update: 2025-05-05 22:08 IST
ಕುಂದಾಪುರ: ಇಲ್ಲಿನ ಕಸಬಾ ಗ್ರಾಮದ ಫೆರಿ ರಸ್ತೆಯಲ್ಲಿರುವ ಪಾರ್ಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಕ್ರಿಕೆಟ್ ಮ್ಯಾಚ್‌ಗೆ ಸಂಬಂಧಿಸಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆ ನಡೆಸುತ್ತಿದ್ದ ಬಗ್ಗೆ ದೊರೆತ ಮಾಹಿತಿಯಂತೆ ಪಿಎಸ್‌ಐ ನಂಜಾ ನಾಯ್ಕ್ ದಾಳಿ ನಡೆಸಿ ಸತೀಶ್ ಎನ್ನುವಾತನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಇಬ್ಬರು ಪರಾರಿಯಾಗಿದ್ದಾರೆ.
ಸತೀಶ್ ಪಾಕರ್ರ್ ಎಂಬ ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನಿಂದ 4,700 ರೂ. ನಗದು ಹಾಗೂ ಮೊಬೈಲ್ ಪೋನನ್ನು ವಶಕ್ಕೆ ಪಡೆಯಲಾಗಿದೆ. ವಿಕ್ಕಿ ಯಾನೆ ವಿಕಾಸ್ ಹಾಗೂ ವಿವೇಕ ದಾಳಿಯ ವೇಳೆ ಪರಾರಿಯಾಗಿದ್ದಾರೆ. ಪ್ರಕರಣದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.