ಗಾಂಜಾ ಸೇವನೆ: ಮೂವರು ವಶಕ್ಕೆ
Update: 2025-05-08 21:45 IST
ಮಣಿಪಾಲ, ಮೇ 8: ಗಾಂಜಾ ಸೇವನೆಗೆ ಸಂಬಂಧಿಸಿ ಮೂವರನ್ನು ಮಣಿಪಾಲ ಹಾಗೂ ಉಡುಪಿ ಸೆನ್ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೇ 7ರಂದು ಉಡುಪಿಯ ನೇಜಾರಿನ ತೃಪ್ತಿ ಲೇಔಟ್ ಪೆಟ್ರೋಲ್ ಪಂಪ್ ಬಳಿ ಮಹಮ್ಮದ್ ಸಾಲಿಕ್(19) ಹಾಗೂ ನೇಜಾರಿನ ಜ್ಯೋತಿ ನಗರದ ಬಸ್ಸು ನಿಲ್ದಾಣದ ಬಳಿ ಮುಹಮ್ಮದ್ ಸಲೀಮ್(20) ಮತ್ತು ಮೇ 1ರಂದು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ಟ್ಯಾಪ್ಮಿ ಬಳಿ ಶ್ರೆಯಾಂಕ್ ಸಂಜಯ್(21) ಎಂಬವರನ್ನು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯರು ನೀಡಿದ ವರದಿಯಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.