×
Ad

ರಕ್ಷಣಾ ಪಡೆಗಳಿಗೆ ಸಹಕಾರ ನೀಡಲು ಮೀನುಗಾರರು ಬದ್ಧ: ಶಾಸಕ ಯಶ್‌ಪಾಲ್ ಸುವರ್ಣ

Update: 2025-05-09 19:29 IST

ಉಡುಪಿ, ಮೇ 9: ಅಪರೇಷನ್ ಸಿಂಧೂರ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ದೇಶದ ಕರಾವಳಿ ಜಿಲ್ಲೆಯ ಕಡಲ ತೀರ ಹಾಗೂ ಸಮುದ್ರ ಭಾಗದಲ್ಲಿ ನಿಗಾ ವಹಿಸುವುದಕ್ಕಾಗಿ ರಕ್ಷಣಾ ಪಡೆಗಳಿಗೆ ಸಂಪೂರ್ಣ ಸಹಕಾರ ನೀಡಲು ಕರಾವಳಿ ಜಿಲ್ಲೆಯ ಮೀನುಗಾರರು ಸದಾ ಸಿದ್ಧವಾಗಿದ್ದರೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಕರ್ನಾಟಕ ಕರಾವಳಿಯ 330 ಕಿಲೋ ಮೀಟರ್ ವ್ಯಾಪ್ತಿಯ ಸಮುದ್ರ ತೀರ ಹಾಗೂ ಮೀನುಗಾರಿಕೆ ಸಂದರ್ಭದಲ್ಲಿ ಸಮುದ್ರದಲ್ಲಿ ನಿಗಾ ವಹಿಸಿ, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಬೋಟ್‌ಗಳ ಬಗ್ಗೆ ತಕ್ಷಣ ಮಾಹಿತಿ ನೀಡಲು ಈಗಾಗಲೇ ಮೀನುಗಾರರಿಗೆ ಮಾಹಿತಿ ನೀಡಲಾಗಿದೆ.

ಮೀನುಗಾರರು ಸದಾ ಕಡಲ ಸೈನಿಕರಂತೆ ದೇಶದ ರಕ್ಷಣೆಗೆ ಸದಾ ಬದ್ಧವಾಗಿದ್ದು, ಈಗಾಗಲೇ ಎಲ್ಲಾ ಬಂದರುಗಳ ಮೀನುಗಾರರ ಸಂಘದ ಮುಖಂಡರು ಮೀನುಗಾರರಿಗೆ ಅಗತ್ಯ ಮಾಹಿತಿ, ಸೂಚನೆಗಳನ್ನು ನೀಡಿದ್ದು ದೇಶದ ತುರ್ತು ಸಂದರ್ಭದಲ್ಲಿ ದೇಶ ಸೇವೆಗೆ ಸದಾ ಸಿದ್ಧರಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News