ವಾರಾಹಿ ಹೊಳೆಗೆ ಹಾರಿ ಯುವಕ ಆತ್ಮಹತ್ಯೆ
ಕುಂದಾಪುರ : ಕ್ಷುಲ್ಲಕಕಾರಣಕ್ಕಾಗಿ ಯುವಕನೋರ್ವ ವಾರಾಹಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಕೂರು ಕಳುವಿನಬಾಗಿಲು ಎಂಬಲ್ಲಿ ನಡೆದಿದೆ.
ಮೃತರನ್ನು ಬಳ್ಕೂರು ಗ್ರಾಮದ ಗಣಪತಿ ಎಂಬವರ ಮೊಮ್ಮಗ ಸ್ವಸ್ತಿಕ್ (21) ಎಂದು ಗುರುತಿಸಲಾಗಿದೆ. 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಮನೆಯಲ್ಲಿಯೇ ಇದ್ದ ಸ್ವಸ್ತಿಕ್, ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಿದ್ದು, ಅಲ್ಲದೇ ಮಾನಸಿಕ ಖಿನ್ನತೆಯಿಂದ ಬಳಲುತಿದ್ದ ಎಂದು ತಿಳಿದುಬಂದಿದೆ.
ಮೇ 7ರಂದು ಮಧ್ಯಾಹ್ನ ಕ್ಷುಲ್ಲಕ ಕಾರಣಕ್ಕೆ ಆತ ತನ್ನ ಅಜ್ಜಿಯೊಂದಿಗೆ ಕೋಪ ಮಾಡಿಕೊಂಡು ಹೋದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಹುಡುಕಾಡಿದಾಗ ಮೇ 8ರಂದು ಮಧ್ಯಾಹ್ನ ಸ್ವಸ್ತಿಕ್ ಮೃತದೇಹ ಬಳ್ಕೂರು ಕಳುವಿನಬಾಗಿಲು ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದೆ. ಈತ ತನಗಿರುವ ಮುಂಗೋಪ ಅಥವಾ ಮಾನಸಿಕ ಖಿನ್ನತೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.