×
Ad

ಕುಂಭಾಶಿ : ಶ್ರೀ ಆನೆಗುಡ್ಡೆ ದೇಗುಲದಲ್ಲಿ ಯೋಧರಿಗಾಗಿ ವಿಶೇಷ ಪೂಜೆ

Update: 2025-05-09 22:15 IST

ಕುಂದಾಪುರ : ದೇಶದ ಸಾರ್ವಭೌಮತೆಯ ಬಗ್ಗೆ ಹೋರಾಡುತ್ತಿರುವ ಭಾರತೀಯ ಸೇನೆಯ ಯೋಧರಿಗೆ ಶ್ರೇಯಸ್ಸು ದೊರೆತು, ಸೇನೆಯ ಶಕ್ತಿ ಇನ್ನಷ್ಟು ವೃದ್ದಿಸಲಿ ಎಂದು ಹಾರೈಸಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕುಂಭಾಶಿಯ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ದೇವಸ್ಥಾನದ ಆನುವಂಶೀಕ ಆಡಳಿತ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯ ಅವರ ನೇತ್ರತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ತೆಕ್ಕಟ್ಟೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಎಪಿಎಂಸಿ ಮಾಜಿ ನಿರ್ದೇಶಕ ಸುಧೀರ್ ಕೆ.ಎಸ್, ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಪೂಜಾರಿ ಮಾಜಿ ಪುರಸಭೆಯ ಸದಸ್ಯ ರತ್ನಾಕರ ಚರ್ಚ್‌ ರಸ್ತೆ, ಮಹಿಳಾ ಸಂಘಟನೆಯ ರಾಧಾ ದಾಸ್ ಕುಂಭಾಶಿ, ಉದ್ಯಮಿ ಕೆ.ಕೆ.ಕಾಂಚನ್ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News