×
Ad

ತಮಿಳುನಾಡಿನ ಮೀನಿನ ವಾಹನಕ್ಕೆ ಕಲ್ಲೆಸೆತ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2025-05-10 20:12 IST

ಕಾರ್ಕಳ, ಮೇ 10: ಸಾಣೂರು ಗ್ರಾಮದ ಪರ್ಪಲೆ ಕೇಮಾರು ಎಂಬಲ್ಲಿ ಮೇ 2ರಂದು ತಮಿಳುನಾಡಿನ ಮೀನು ಸಾಗಾಟದ ಲಾರಿಯ ಗಾಜಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೇರಿದೆ.

ದುರ್ಗಾ ಪ್ರಸಾದ್, ಮೂಡಬಿದ್ರೆ ಬೆಳುವಾಯಿಯ ಪ್ರಮೋದ(34), ಬಂಟ್ವಾಳ ಅರಳ ನಿವಾಸಿ ಶಿವರಾಜ್ ಯಾನೆ ಶಿವ(30) ಬಂಧಿತ ಆರೋಪಿಗಳು.

ಮಣಿಕಂಡನ್ ಎಂಬವರು ಮೀನು ಲಾರಿಯಲ್ಲಿ ಮಲ್ಪೆಬಂದರಿನಲ್ಲಿ ಮೀನು ಲೋಡ್ ಮಾಡಿಕೊಂಡು ತಮಿಳನಾಡಿಗೆ ಹೊರಟಿದ್ದು, ದಾರಿ ಮಧ್ಯೆ ಕಾರ್ಕಳ ಕಡೆಯಿಂದ ಎರಡು ಬೈಕಿನಲ್ಲಿ ಬಂದ ಮುಸುಕು ಧಾರಿಗಳು ಮೀನು ತುಂಬಿದ ಲಾರಿಯ ಎದುರುಗಡೆಯ ಗ್ಲಾಸಿಗೆ ಕಲ್ಲನ್ನು ಹೊಡೆದು ಪರಾರಿ ಯಾಗಿದ್ದರು. ಇದರಿಂದ ಲಾರಿಯ ಎದುರುಗಡೆ ಗಾಜು ಒಡೆದು ಸುಮಾರು 15,000ರೂ. ನಷ್ಟ ಉಂಟಾಗಿತ್ತು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖೆ ನಡೆಸಿದ ಪೊಲೀಸರು ಮೇ 7ರಂದು ಆರೋಪಿ ದುರ್ಗಾಪ್ರಸಾದ್‌ನನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸ್ದಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣದ ಉಳಿದ ಇಬ್ಬರು ಆರೋಪಿ ಗಳನ್ನು ಮೇ 10ರಂದು ಮೂಡಬಿದ್ರೆ ತಾಲ್ಲೂಕಿನ ಅಲಂಗಾರು ಎಂಬಲ್ಲಿ ವಶಕ್ಕೆ ಪಡೆದು ಠಾಣೆಯಲ್ಲಿ ಬಂಧಿಸಲಾಗಿದೆ. ವಿಚಾರಣೆಯ ನಂತರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News