×
Ad

ಅಂತಾರಾಷ್ಟ್ರೀಯ ಸಂಖ್ಯೆಯಿಂದ ಅನುಮಾನಾಸ್ಪದ ಸಂದೇಶ, ಲಿಂಕ್‌ಗಳಿಗೆ ಪ್ರತಿಕ್ರಿಯಿಸಬಾರದು: ಎಸ್ಪಿ ಡಾ. ಅರುಣ್

Update: 2025-05-10 21:36 IST

ಡಾ. ಅರುಣ್

ಉಡುಪಿ: ಕಾರ್ಕಳದ ಯುವಕನೊಬ್ಬ ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಅನುಮಾನಾಸ್ಪದವಾಗಿ ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿದ್ದು, ಯಾವುದೇ ಅಂತಾರಾಷ್ಟ್ರೀಯ ಸಂಖ್ಯೆಯಿಂದ ಅನುಮಾನಾಸ್ಪದ ಸಂದೇಶ ಅಥವಾ ಲಿಂಕ್‌ಗಳಿಗೆ ಪ್ರತಿಕ್ರಿಯಿಸಬಾರದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಕೆ ಅರುಣ್ ತಿಳಿಸಿದ್ದಾರೆ.

ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಯಾವುದೇ ಒಟಿಪಿ ಅಥವಾ ನಿಮ್ಮ ವೈಯಕ್ತಿಕ ಮಾಹಿತಿ ಶೇರ್ ಮಾಡಬಾರದು. ಯಾವುದೇ ತುರ್ತು ಸಂದರ್ಭಗಳಿಗೆ 1930ಗೆ ಡಯಲ್ ಮಾಡಿ ಅಥವಾ www.Cybercrime.gov.in ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News