×
Ad

ವೈಶಾಖ ಬುದ್ಧ ಪೂರ್ಣಿಮೆ ಆಚರಣೆ: ಹಲವು ವಿಶಿಷ್ಟ ಕಾರ್ಯಕ್ರಮ

Update: 2025-05-13 17:53 IST

ಉಡುಪಿ: ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ, ಬೋಧಿಸತ್ವ ಬುದ್ಧ ವಿಹಾರ ಹಾವಂಜೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುದ್ದ ಜಯಂತಿಯ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ಎಲ್ಲಾ 150 ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಮತ್ತು ಡಾ.ವಾಸುದೇವ್ ಎಸ್. ಶುಭ ಹಾರೈಸಿದರು. ಈ ಸಂದರ್ಭ ಬೋಧಿಸತ್ವ ಬುದ್ಧ ಫೌಂಡೇಶನ್‌ನ ಅಧ್ಯಕ್ಷ ಶೇಖರ್ ಹಾವಂಜೆ, ಕಾರ್ಯದರ್ಶಿ ಶರತ್ ಎಸ್., ಟ್ರಸ್ಟಿ ಗಳಾದ ವಿಠಲ್, ಪ್ರತಾಪ್ ಹಾಗೂ ಉಪಾಸಿಕರಾದ ಪ್ರಕಾಶ್ ಬಿ.ಬಿ., ಪಕೀರಪ್ಪ ಎಂ., ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಗೋಪಾಲ್ ಶಿವಪುರ, ರಮೇಶ್ ಮಾಬಿಯಾನ್, ಸುಜಾತ ಎಸ್ ಹಾವಂಜೆ, ವಿಜಯ್ ಬಾರ್ಕೂರು, ಧಮ್ಮ ಪ್ರಾಧ್ಯಾಪಕಿ ಪೃಥ್ವಿ ಒಳಗುಡ್ಡೆ, ವನಿತಾ ಮೊದಲಾದವರು ಉಪಸ್ಥಿತರಿದ್ದರು.

ವಂದನೆ- ಮೈತ್ರಿ ಧ್ಯಾನ: ನಂತರ ಹಾವಂಜೆಯಲ್ಲಿರುವ ಬೋಧಿಸತ್ವ ಬುದ್ಧ ವಿಹಾರದಲ್ಲಿ ಧಮ್ಮಾಚಾರಿ ಶಂಭು ಸುವರ್ಣ ನೇತೃತ್ವದಲ್ಲಿ ಬುದ್ಧ ವಂದನೆ, ಧ್ಯಾನ ಮತ್ತು ಮೈತ್ರಿ ಧ್ಯಾನ ಜರಗಿತು.

ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನೇಜಾರಿನ ಸ್ಪಂದನ ವಿಶೇಷಚೇತನ ಹಾಗೂ ಸಾಲ್ಮರದ ವಿಶೇಷ ಚೇತನ ಮಕ್ಕಳೊಂದಿಗೆ ಸಹಭೋಜನ ಮಾಡಲಾಯಿತು.

ಮನೆ ಮನೆಗೆ ಬುದ್ಧನಡಿಗೆ: ಬುದ್ಧ ಜಯಂತಿಯ ಅಂಗವಾಗಿ ಬೋಧಿ ಸತ್ತಹ (ಸಪ್ತಾಹ) ಕಾರ್ಯಕ್ರಮವನ್ನು ಮೇ ೫ರಿಂದ ೧೧ರವರೆಗೆ ಮನೆ ಮನೆಗೆ ಬುದ್ಧನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೊಡವೂರಿನ ಕಮಲ ಸುವರ್ಣ, ಪೆರಂಪಳ್ಳಿಯ ಬೌದ್ಧ ಚಿಂತಕ ಸೋಮಪ್ಪ ಎಚ್.ಜಿ. ಮನೆಯಲ್ಲಿ ಬುದ್ಧವಂದನೆ ಮಾಡಲಾಯಿತು. ಶಿವಪುರದ ಗೋಪಾಲ್ ಮತ್ತು ವಸಂತಿ ದಂಪತಿ, ಕುಕ್ಕೆಹಳ್ಳಿಯ ಸಂಜೀವ ಮತ್ತು ಸುರೇಖಾ ದಂಪತಿ, ಚೇರ್ಕಾಡಿಯ ಜಾರ್ಜೆಡ್ಡಿನ ಮುತ್ತಕ್ಕ ರಾಮಣ್ಣ, ಹೆಬ್ರಿ ತಾಲೂಕಿನ ಪಡುಕುಡೂರಿನ ನಾಥು ಮತ್ತು ಬೇಬಿ, ಹೇರೂರಿನ ಸದಾಶಿವ ಶೆಟ್ಟಿ ಮತ್ತು ವಿನೋದ ಶೆಡ್ತಿ ದಂಪತಿ, ಉಪ್ಪೂರಿನ ಸರಸ್ವತಿ ನಗರದ ಅಂಬೇಡ್ಕರ್ ಭವನದಲ್ಲಿ ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ, ಧಮ್ಮದಾನ ಕಾರ್ಯಕ್ರಮ ಆಚರಿಸಲಾಯಿತು.

ಬುದ್ಧ ಜಯಂತಿ: ಮೇ 12ರಂದು ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ದೇವರಾಜ್, ಶಂಭು ಸುವರ್ಣ, ಫಕೀರಪ್ಪ ಎಂ., ಗೋಪಾಲ್ ಶಿವಪುರ, ಸಂಜೀವ ನಾಯ್ಕ್ ಕುಕ್ಕೆಹಳ್ಳಿ, ಪ್ರಕಾಶ್ ಬಿಬಿ, ಸುಜಾತ, ಪೃಥ್ವಿ ಮುಂತಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಭೋದಿಸತ್ವ ಬುದ್ಧ ಫೌಂಡೇಶನ್‌ನ ಅಧ್ಯಕ್ಷ ಶೇಖರ್ ಹಾವಂಜೆ ವಹಿಸಿದ್ದರು. ಜಯಶೀಲ ಬಿ.ರೋಟೆ ಕಾರ್ಯಕ್ರಮ ನಿರೂಪಿಸಿದರು. ಶರತ್ ಎಸ್.ಹಾವಂಜೆ ಸ್ವಾಗತಿಸಿದರು. ವಿಠ್ಠಲ್ ಸಾಲಿಕೇರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News