×
Ad

‘ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್’ ಪ್ರಾಜೆಕ್ಟ್ ಪ್ರದರ್ಶನ- ಸ್ಪರ್ಧೆ

Update: 2025-05-13 17:56 IST

ಉಡುಪಿ : ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಾಂಸ್ಕೃತಿಕ ಘಟಕ, ಹವ್ಯಾಸ ಪ್ರಾಜೆಕ್ಟ್ ಘಟಕ, ಐಎಸ್‌ಟಿಇ ವಿದ್ಯಾರ್ಥಿ ಘಟಕವು ಸಂಸ್ಥೆಯ ಇನ್ನೋವೇಶನ್ ಘಟಕದ ಸಹ ಯೋಗದೊಂದಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಟೆಕ್ನಿಕಲ್ ಪ್ರಾಜೆಕ್ಟ್ ಐಡಿಯೇಶನ್ ಎಂಬ ವಿಷಯದಡಿ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಸೋಮವಾರ ಆಯೋಜಿಸಲಾಗಿತ್ತು.

ಪ್ರದರ್ಶನವನ್ನು ಉದ್ಘಾಟಿಸಿದ ಕಂಬಳಾ ಸೋಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಾಫ್ಟ್‌ವೇರ್ ಡೆವಲಪರ್, ಸಂಸ್ಥೆಯ ಹಳೆ ವಿದ್ಯಾರ್ಥಿ ಹರಿಪ್ರಸಾದ್ ಭಟ್ ಕೆ. ಮಾತನಾಡಿ, ಇಂತಹ ಪ್ರಾಜೆಕ್ಟ್ ಸ್ಫರ್ಧೆಯಲ್ಲಿ ಭಾಗವಹಿಸುವುದರಿಂದ ಸ್ವಅಭಿವೃದ್ಧಿಗೆ ಅಮೂಲ್ಯವಾದ ಅವಕಾಶ ನೀಡಿದಂತಾಗುತ್ತದೆ. ಅಲ್ಲದೆ ಇದು ತಾಂತ್ರಿಕ ಕೌಶಲ್ಯವನ್ನು ಬಲಪಡಿಸಿ ಉದ್ಯೋಗವನ್ನು ಪಡೆಯಲು ನೆರವಾಗುತ್ತದೆ ಎಂದರು.

ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಮಾತನಾಡಿ, ಇದು ವಿದ್ಯಾರ್ಥಿಗಳ ತಾಂತ್ರಿಕ ಕಲಿಕೆಗೆ ಸಹಾಯಕವಾಗಿದೆ. ಆಳವಾದ ಕಲಿಕೆಗಾಗಿ ವಿದ್ಯಾರ್ಥಿಗಳ ಪ್ರಾಯೊಗಿಕ ಕಲಿಕೆಯ ಸಾಕಷ್ಟು ಮಹತ್ತರವಾಗಿದೆ ಎಂದು ತಿಳಿಸಿದರು.

ಈ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಒಟ್ಟು 105 ಪ್ರಾಜೆಕ್ಟ್‌ಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರದರ್ಶಿಸ್ಪಟ್ಟವು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹಾರ್ಮನ್ ಇಂಡಿಯಾ ಇಂಟರ್‌ನ್ಯಾಷನಲ್‌ನ ಆಟೋಮೋಟಿವ್ ಇಂಜಿನಿಯರ್ ಪ್ರಗತಿ ನಾಯಕ್ ಮಾತನಾಡಿ ವಿದ್ಯಾರ್ಥಿಗಳು ಇಂತಹ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ತಾಂತ್ರಿಕಕಲಿಕೆಯ ಪ್ರಯೋಜನವನ್ನು ಪಡೆಯಬೇಕು ಮತ್ತು ತಾಂತ್ರಿಕ ಕೌಶಲ್ಯ ಮತ್ತು ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ ಎಂದರು.

ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಡಾ.ರಾಧಕೃಷ್ಣ ಐತಾಳ್ ಮಾತನಾಡಿದರು. ಆರು ಉತ್ತಮ ಪ್ರಾಜೆಕ್ಟ್‌ಗಳಿಗೆ ನಗದು ಬಹುಮಾನವನ್ನು ನೀಡಲಾಯಿತು. ಸಂಸ್ಥೆಯ ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಡೀನ್‌ಗಳು, ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News