×
Ad

ಇಂದ್ರಾಳಿ ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಣೆ ಪೂರ್ಣ

Update: 2025-05-13 19:20 IST

ಉಡುಪಿ, ಮೇ 13: ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ಮೇಲ್ಸೇತುವೆಯ ಬೌಸ್ಟ್ರಿಂಗ್ ಗರ್ಡರ್ ಜೋಡಿಸುವ ಕಾರ್ಯ ಮಂಗಳವಾರ ಬೆಳಗ್ಗೆ ಪೂರ್ಣಗೊಳಿಸಲಾಯಿತು.

ಭಾರತೀಯ ರೈಲ್ವೆ ಇಲಾಖೆಯ ಅನುಮತಿಯಂತೆ ಸೋಮವಾರ ಬೆಳಗ್ಗೆ 11.30ರಿಂದ ಗರ್ಡರ್ ಜೋಡಣೆ ಕಾರ್ಯ ಆರಂಭಿಸಲಾಗಿತ್ತು. 450 ಮೆಟ್ರಿಕ್ ಟನ್ ತೂಕದ ಸುಮಾರು 60 ಮೀಟರ್ ಉದ್ದದ ಈ ಗರ್ಡರ್‌ನ್ನು ಮುಂದಕ್ಕೆ ದೂಡಿಕೊಂಡು ಇನ್ನೊಂದು ತುದಿಯನ್ನು ತಲುಪಿಸಲಾಗಿದೆ.

ಇದೀಗ ರೈಲು ಹಳಿಗಳ ಎರಡು ಬದಿಗಳಲ್ಲಿ ಅಳವಡಿಸಲಾದ ಕಾಂಕ್ರೀಟ್ ಸ್ಲ್ಯಾಬ್‌ಗಳಲ್ಲಿ ಗರ್ಡರ್‌ನ್ನು ಜೋಡಿಸಲಾಗಿದೆ. ರೈಲು ಸಂಚಾರದ ವೇಳೆ ಜೋಡಣೆ ಕಾರ್ಯವನ್ನು ಸ್ಥಗಿತಗೊಳಿಸುತ್ತ ಅತ್ಯಂತ ಸುರಕ್ಷತಾ ಕ್ರಮಗಳೊಂದಿಗೆ ಇಂದು ಬೆಳಗ್ಗೆ ಪೂರ್ಣಗೊಳಿಸಲಾಯಿತು. ಮುಂದೆ ಕೆಲವೊದು ತಾಂತ್ರಿಕ ಕಾರ್ಯಗಳನ್ನು ಮುಗಿಸಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News