ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ: ಅವಧಿ ವಿಸ್ತರಣೆ
Update: 2025-05-15 19:57 IST
ಉಡುಪಿ, ಮೇ 15: ಉಡುಪಿ ನಗರಸಭಾ ವ್ಯಾಪ್ತಿಯ ಕಟ್ಟಡದ ಹಾಗೂ ಖಾಲಿ ನಿವೇಶನದ ಮಾಲೀಕರು ಹಾಗೂ ಅಧಿಭೋಗದಾರರಿಗೆ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5ರಷ್ಟು ರಿಯಾಯಿತಿ ನೀಡಿ, ಕಲ್ಪಿಸಿರುವ ಅವಕಾಶದ ಅವಧಿಯನ್ನು ಜೂನ್ 30 ರ ವರೆಗೆ ವಿಸ್ತರಿಸಲಾಗಿದೆ.
ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು 2024-25 ರ ಆಸ್ತಿ ತೆರಿಗರಯ ಮೇಲೆ ಶೇ.3ರಷ್ಟು ಹೆಚ್ಚಿಸಿ ಪಾವತಿಸು ವಂತೆ ಹಾಗೂ 2024-25ನೇ ಸಾಲಿನ ಹಾಗೂ ಹಿಂದಿನ ಅವಧಿಯ ಆಸ್ತಿ ತೆರಿಗೆ ಪಾವತಿಸದೇ ಇರುವವರು ಶೇ.2ರಷ್ಟು ದಂಡದೊಂದಿಗೆ ಪಾವತಿಸಿ, ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.