ಮುಸ್ಲಿಂ ಬಾಂಧವ್ಯ ವೇದಿಕೆ ಅಧ್ಯಕ್ಷರಾಗಿ ಝಾಕೀರ್ ಹುಸೇನ್
Update: 2025-05-20 17:52 IST
ಝಾಕೀರ್ - ರೆಹಮತುಲ್ಲಾ
ಉಡುಪಿ: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ 2025-26ನೇ ಸಾಲಿನ ಅಧ್ಯಕ್ಷರಾಗಿ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಝಾಕಿರ್ ಹುಸೇನ್ ಉಚ್ಚಿಲ ಮತ್ತು ಕಾರ್ಯದರ್ಶಿಯಾಗಿ ರೆಹಮತುಲ್ಲಾ ದಾವಣಗೆರೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಪದಾಧಿಕಾರಿಗಳು ಜೂ.28ರಂದು ವಿಜಯಪುರದಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭ ದಲ್ಲಿ ಸಂಘಟನೆಯ ಜವಾಬ್ದಾರಿ ಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.