×
Ad

ಉಡುಪಿಯಲ್ಲಿ ತಿರಂಗಾ ಯಾತ್ರೆ ಕಾಲ್ನಡಿಗೆ ಜಾಥಾ

Update: 2025-05-20 20:34 IST

ಉಡುಪಿ: ರಾಷ್ಟ್ರ ರಕ್ಷಣಾ ಸಮಿತಿ ಉಡುಪಿ ಜಿಲ್ಲೆಯ ವತಿಯಿಂದ ಆಪರೇಷನ್ ಸಿಂಧೂರ ಯಶಸ್ಸಿನ ಸಂಭ್ರಮಾಚರಣೆ ಸಲುವಾಗಿ ವೀರ ಸೇನಾನಿಗಳಿಗೆ ನೈತಿಕ ಬಲ ತುಂಬಲು ಮಂಗಳವಾರ ಉಡುಪಿ ಜೋಡುಕಟ್ಟೆ ಯಿಂದ ಜಟ್ಕಾ ಸ್ಟ್ಯಾಂಡ್ ವರೆಗೆ ತಿರಂಗಾ ಯಾತ್ರೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಯೋಧ ಸುರೇಶ್ ಬಾರಕೂರು, ಉಡುಪಿ ಶೋಕಾ ಮಾತಾ ಇಗರ್ಜಿಯ ಸಹಾಯಕ ಧರ್ಮಗುರು ಫಾ.ಪ್ರವೀಣ್ ಡಿಸೋಜ, ಕರ್ನಲ್ ಎಫ್‌ಎ ರೋಡ್ರಿಗಸ್, ಉಡುಪಿ ಪಿಪಿಸಿ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶು ಪಾಲೆ ಸುಕುನ್ಯಾ ಮೇರಿ, ನಿವೃತ್ತ ಯೋಧರ ಸಂಘದ ಅಧ್ಯಕ್ಷ ಕೇಶವ ಮಲ್ಪೆ ಮಾತನಾಡಿದರು.

ಜಾಥದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದಯ ಕುಮಾರ್ ಶೆಟ್ಟಿ, ರೇಶ್ಮಾ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News