ಉಡುಪಿ ನಗರದಲ್ಲಿ ಪೊಲೀಸರಿಂದ ಸೈಕಲ್ ರ್‍ಯಾಲಿ
ಉಡುಪಿ, ಜೂ.1: ಉಡುಪಿ ಪೊಲೀಸ್ ಉಪವಿಭಾಗ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವತಿಯಿಂದ ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಸೈಕಲ್ ರ್‍ಯಾಲಿಯನ್ನು ರವಿವಾರ ಉಡುಪಿ ನಗರದಲ್ಲಿ ಆಯೋಜಿಸಲಾಗಿತ್ತು.
ನಗರದ ಜೋಡುಕಟ್ಟೆಯಲ್ಲಿ ಸೈಕಲ್ ರ್‍ಯಾಲಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ರ್‍ಯಾಲಿ ಅಜ್ಜರಕಾಡು, ಬ್ರಹ್ಮಗಿರಿ, ಬನ್ನಂಜೆ, ಕರಾವಳಿ ಬೈಪಾಸ್, ಸಿಟಿ, ಸರ್ವಿಸ್ ಬಸ್ ನಿಲ್ದಾಣ ಮಾರ್ಗವಾಗಿ ಬೋರ್ಡ್ ಹೈಸ್ಕೂಲ್‌ನಲ್ಲಿ ಸಮಾಪ್ತಿ ಗೊಂಡಿತು.
ಈ ಸಂದರ್ಭದಲ್ಲಿ ಉಡುಪಿ ಉಪವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ., ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ತಿಮ್ಮಪ್ಪ ಗೌಡ, ಆರ್‌ಪಿಐ ರವಿ ಕುಮಾರ್, ಉಡುಪಿ ನಗರ ಠಾಣಾ ಎಸ್ಸೈಗಳಾದ ಭರತೇಶ್, ಗೋಪಾಲರಕೃಷ್ಣ ಜೋಗಿ, ನಾರಾಯಣ, ಮಲ್ಪೆ ಎಸ್ಸೈ ರವಿ, ಬ್ರಹ್ಮಾವರ ಎಸ್ಸೈಗಳಾದ ಸುದರ್ಶನ್, ಮಹಾಂತೇಶ್, ಹಿರಿಯಡ್ಕ ಎಸ್ಸೈ ಪುನೀತ್, ನಗರ ಸಂಚಾರ ಠಾಣೆಯ ಎಸ್ಸೈ ಪ್ರಕಾಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.