ಉದ್ಯಾವರ: ಚರ್ಮರೋಗ ತಪಾಸಣಾ ಶಿಬಿರ
ಉಡುಪಿ, ಜೂ.1: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಗದ ತಂತ್ರ ವಿಭಾಗದ ವತಿಯಿಂದ ಚರ್ಮರೋಗ ತಪಾಸಣಾ ಶಿಬಿರವನ್ನು ಉದ್ಯಾವರದ ಟ್ರಿನಿಟಿ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಪಾಲ್ಗೊಂಡ ಕಾಲೇಜಿನ ಶಿಕ್ಷಕ ವೃಂದ, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ತಜ್ಞ ವೈದ್ಯರಾದ ಡಾ.ಚೈತ್ರಾ ಹೆಬ್ಬಾರ್, ಡಾ.ಶ್ರೀನಿಧಿ ಆರ್., ಡಾ.ರವಿಕೃಷ್ಣ ಎಸ್., ಡಾ. ಶುಭಾ ಪಿ.ಯು. ಮತ್ತು ಡಾ.ರಂಜನಾ ಕೆ ಸ್ನಾತಕೋತ್ತರ ಮತ್ತು ಕಿರುವೈದ್ಯರ ಸಹಯೋಗ ದೊಂದಿಗೆ ನಡೆಸಿಕೊಟ್ಟರು.
ಟ್ರಿನಿಟಿ ಐಟಿಐ ಕಾಲೇಜಿನ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಜೋನ್ ಎಂ.ಡಿಸೋಜ ಶುಭ ಹಾರೈಸಿ ದರು. ಶಿಬಿರಾರ್ಥಿಗಳಿಗೆ ಕಜ್ಜಿ, ಚರ್ಮದ ಅಲರ್ಜಿ, ಗಜಕರ್ಣ, ಮೊಡವೆ, ಕಾಂತಿಹೀನತೆ, ತಲೆಹೊಟ್ಟು, ಕೂದಲು ಉದುರುವಿಕೆ ಮುಂತಾದ ಸಾಮಾನ್ಯ ಸಮಸ್ಯೆಗಳಿಂದ ಪಾರಾಗಲು ಉತ್ತಮ ಜೀವನ ಶೈಲಿಯ ಬಗ್ಗೆ ಮಾಹಿತಿ, ಪಥ್ಯಾಹಾರ ಸಲಹೆಗಳೊಂದಿಗೆ ಉಚಿತ ಔಷಧಿಯನ್ನು ವಿತರಿಸಲಾಯಿತು.
ಸಂಪೂರ್ಣ ಆರೋಗ್ಯ ಶಿಬಿರವು ಎಸ್‌ಡಿಎಂ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಮಮತಾ ಕೆ.ವಿ. ಹಾಗೂ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ಮಾರ್ಗದರ್ಶನದಲ್ಲಿ ನೆರೆವೇರಿತು.