×
Ad

ನಿರೋಗಿಗಳಾಗಿ ಬಾಳಲು ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ: ಡಾ.ನಾರಾಯಣ ಅಂಚನ್

Update: 2025-06-01 19:24 IST

ಶಿರ್ವ, ಜೂ.1: ಆಯುರ್ವೇದ ಔಷಧಿಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಎಲ್ಲಾ ರೀತಿಯ ಕಾಯಿಲೆ ಗಳಿಗೂ ಪ್ರಯೋಜನಕಾರಿ ಯಾಗಿದೆ. ಕ್ಯಾನ್ಸರ್ ಸಹಿತ ಹೃದಯಸಂಬಂಧಿ ಕಾಯಿಲೆ ರೋಗಿಗಳೂ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಸುಖಿಗಳಾಗಿ ನಿರೋಗಿಗಳಾಗಿ ಬಾಳಲು ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ ಎಂದು ಪಡುಬಿದ್ರಿ ಅಂಚನ್ ಆಯುರ್ವೇದ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಡಾ.ಟಿ.ನಾರಾಯಣ ಅಂಚನ್ ಹೇಳಿದ್ದಾರೆ.

ಶಂಕರಪುರ ಸಮೀಪದ ಸಾಲ್ಮರ ಕೃಷ್ಣವೇಣಿ ಆಯುರ್ವೇದ ಚಿಕಿತ್ಸಾ ಮತುತಿ ಸ್ವಾಸ್ಥ್ಯ ಕೇಂದ್ರ, ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಮತ್ತು ಇನ್ನಂಜೆ ಯುವಕ ಮಂಡಲ ಇವರ ಸಹಯೋಗದಲ್ಲಿ ಸಾಲ್ಮರ ಆಯುರ್ವೇದ ಕೇಂದ್ರದಲ್ಲಿ ರವಿವಾರ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಮುನಿಯಾಲು ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶು ಪಾಲ ಡಾ.ಸತ್ಯನಾರಾಯಣ ಮಾತನಾಡಿ, ಆರೋಗ್ಯವನ್ನು ಕಾಪಾಡುವುದು ಹಾಗೂ ಉತ್ತಮ ಗೊಳಿಸುವುದು ಈ ಕೇಂದ್ರದ ಪ್ರಧಾನ ಉದ್ದೇಶವಾಗಿದೆ. ಇದು ಜೀವನ ಶೈಲಿಯ ಒಂದು ಭಾಗವಾಗಿದೆ. ವೈಜ್ಞಾನಿಕವಾಗಿ ಕಾಯಿಲೆಗಳನ್ನು ಗುರುತಿಸಿ ಆಯುರ್ವೇದದ ಮೂಲಕ ಗುಣಪಡಿಸುವುದು. ಉತ್ತಮ ಹಾಗೂ ಅತ್ಯಂತ ಸುರಕ್ಷಿತ ಔಷಧಿಗಳು ಆಯುರ್ವೇದದಲ್ಲಿವೆ ಎಂದರು.

ಇನ್ನಂಜೆ ಯುವಕ ಮಂಡಲದ ಅಧ್ಯಕ್ಷ ಮಧುಸೂದನ ಆಚಾರ್ಯ ಶುಭ ಹಾರೈಸಿದರು. ಕೇಂದ್ರದ ಟ್ರಸ್ಟಿ ಸಾಲ್ಮರ ಪದ್ಮನಾಭ ಭಟ್ ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್‌ವ ವಿಶ್ವಸ್ಥ ಸಿಎ. ಹರಿದಾಸ್ ಭಟ್ಟ ವಹಿಸಿದ್ದರು.

ಡಾ.ಲಕ್ಷ್ಮೀಶ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ರಮೇಶ್ ಮಿತ್ತಂತಾಯ ಸ್ವಾಗತಿಸಿದರು. ತನುಜಾ ನಿರೂಪಿಸಿದರು. ಜ್ಯೋತಿ ವಂದಿಸಿದರು. ಶಿಬಿರದಲ್ಲಿ ವೈಧಾಧಿಕಾರಿಗಳಾದ ಡಾ.ಸ್ಟೀವ, ಡಾ.ಮಂಜುಶ್ರೀ, ಡಾ.ಸಾಯಿಪ್ರಸಾದ್, ಡಾ.ಸುಫೈಲ ಸಹಕರಿಸಿದರು. ಶಿಬಿರದಲ್ಲಿ ವಿವಿಧ ಕಾಯಿಲೆಗಳ ತಪಾಸಣೆ ನಡೆಸಿ ಉಚಿತ ಔಷಧಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News