×
Ad

ಶಸ್ತ್ರಚಿಕಿತ್ಸೆಯ ಭಯದಿಂದ ವ್ಯಕ್ತಿ ಆತ್ಮಹತ್ಯೆ

Update: 2025-06-01 21:31 IST

ಕಾಪು, ಜೂ.1: ಶಸ್ತ್ರಚಿಕಿತ್ಸೆ ಭಯದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಏಣಗುಡ್ಡೆ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಕಟಪಾಡಿ ಏಣಗುಡ್ಡೆಯ ಶೇಖರ ಎ.ಕೋಟ್ಯಾನ್ (73) ಎಂದು ಗುರುತಿಸಲಾಗಿದೆ. ಇವರು ಹರ್ನಿಯಾ ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಮೇ 30ರಂದು ಮಾಡಲು ನಿರ್ಧರಿಸಿದ್ದು, ಇದರಿಂದ ಹೆದರಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು.

ಬಳಿಕ ಅವರು ಹರ್ನಿಯಾ ಚಿಕಿತ್ಸೆಗೆ ಹಾಜರಾಗಲು ಹೆದರಿ ಮನನೊಂದು ಏಣಗುಡ್ಡೆ ಗ್ರಾಮದ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಇವರ ಮೃತದೇಹ ಮೇ 31ರಂದು ಮಧ್ಯಾಹ್ನ ಪತ್ತೆಯಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News