ಉಡುಪಿ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದ ಒಳರೋಗಿ ಮೃತ್ಯು
Update: 2025-06-05 20:31 IST
ಉಡುಪಿ, ಜೂ.5: ಉಡುಪಿ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿದ್ದ ಕಳಸ ಮೂಲದ ಒಳರೋಗಿಯೊಬ್ಬರು ಅಂಬಲಪಾಡಿ ಶೆಟ್ಟಿ ಲಂಚ್ ಹೋಂ ಬಳಿ ಜೂ.4ರಂದು ಮಧ್ಯಾಹ್ನ ವೇಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸದ ಪೊಮ್ಮು(57) ಎಂದು ಗುರುತಿಸಲಾಗಿದೆ. ಇವರು ಹೊಟ್ಟೆ ನೋವು, ಉಸಿರಾಟ ಸಮಸ್ಯೆ ಮತ್ತು ಕಾಲು ಊತಕ್ಕಾಗಿ ಮೇ 29ರಂದು ಉಡುಪಿ ಸರಕಾರಿ ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದರು. ನಂತರ ಅವರು ಜೂ.2ರಂದು ಆಸ್ಪತ್ರೆಯಿಂದ ನಾಪತ್ತೆ ಯಾಗಿದ್ದರು.
ಅಂಬಲಪಾಡಿಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದ ಪೊಮ್ಮು ಅವರನ್ನು ಸಮಾಜ ಸೇವಕ ನಿತ್ಯಾನಂತ ಒಳಕಾಡು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದು ತಿಳಿದುಬಂದಿದೆ. ಇವರು ಉಸಿರಾಟ ಸಮಸ್ಯೆ ಹೊಟ್ಟೆನೋವು ಉಲ್ಬಣಗೊಂಡು ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.