ಅಹಮದಾಬಾದ್‌ನಲ್ಲಿ ವಿಮಾನ ದುರಂತ: ಉಡುಪಿ ಹಾಶಿಮಿ ಮಸೀದಿಯಲ್ಲಿ ಪ್ರಾರ್ಥನೆ
Update: 2025-06-13 18:00 IST
ಉಡುಪಿ, ಜೂ.13: ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಡಿದವರಿಗೆ ಉಡುಪಿ ನಾಯರ್‌ಕೆರೆಯ ಹಾಶಿಮಿ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝ್‌ನ ಬಳಿಕ ಪ್ರಾರ್ಥನೆ ಮಾಡಲಾಯಿತು.
ಮೌಲನ ಹಶೀಮ್ ಉಮ್ರಿ ನೇತೃತ್ವದಲ್ಲಿ ನಡೆದ ನಮಾಝ್‌ನ ಬಳಿಕ ಹಫೀಝ್ ಗಲೀಬ್ ದುರಂತದಲ್ಲಿ ಮಾಡಿದವರಿಗೆ ದುವಾ ನೆರವೇರಿಸಿದರು. ಮೃತರ ಕುಟುಂಬಗಳಿಗೆ ಈ ಸಂಕಷ್ಟದ ಸಮಯದಲ್ಲಿ ದುಃಖವನ್ನು ಸಹಿಸಿ ಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಜಕ್ರಿಯ ಆಸಾದಿ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮನ್ನಾ ಮೊದಲಾದವರು ಉಪಸ್ಥಿತರಿದ್ದರು.