ಬಂಟಕಲ್ ಕಾಲೇಜಿನಲ್ಲಿ ಮಾಂತ್ರಿಕ ಎಐ ಉಪನ್ಯಾಸ ಕಾರ್ಯಕ್ರಮ
ಉಡುಪಿ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಉದ್ಯಮಶೀಲತಾ ಅಭಿವೃದ್ಧಿ ಘಟಕವು ಇನ್ಕ್ಯುಬೇಷನ್ ಕೇಂದ್ರದ ಸಹಯೋಗದೊಂದಿಗೆ ಮಾಂತ್ರಿಕ ಎಐ- ದಿ ಕೆರಿಯರ್ ಇನ್ಕ್ಯುಬೇಟರ್ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಉಡುಪಿಯ ಇಂಡಿವಿಲೇಜ್ ಟೆಕ್ ಸೊಲ್ಯೂಷನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಕೆ.ಅರಿಮಣಿತ್ತಾಯ, ಶಾರೀರಿಕ ಭಾವನಾತ್ಮಕ ಬೌದ್ಧಿಕ ಮತ್ತು ಆಧ್ಯಾತ್ಮಿಕ ಎಂಬ ನಾಲ್ಕು ಶಕ್ತಿ ಪ್ರಕಾರಗಳು ನಿರ್ವಹಿಸುವ ನಿರ್ಣಾಯಕ ಪಾತ್ರವನ್ನು ತಿಳಿಸಿದರು. ಶಿಕ್ಷಣವು ಧೈರ್ಯಶಾಲಿ ಚಿಂತನೆ ಯನ್ನು ಪ್ರೇರೇಪಿಸಬೇಕೇ ಹೊರತು ಮೌಖಿಕ ಕಲಿಕೆಯನ್ನಲ್ಲ. ಭಾರತವು 117000 ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ ಎಂದರು.
ಬಳಕೆದಾರರ ಪ್ರೊಫೈಲ್‌ಗಳನ್ನು ನಿರ್ಮಿಸುವ, ಕೌಶಲ್ಯ ಅಂತರವನ್ನು ಎತ್ತಿ ತೋರಿಸುವ ಮತ್ತು ಮೌಲ್ಯ ಮಾಪನ ವರದಿಯನ್ನು ಒದಗಿಸುವ ಅಐ ಆಧಾರಿತ ವೃತ್ತಿ ಇನ್ಕ್ಯುಬೇಟರ್ ಮಾಂತ್ರಿಕ ಎಐ ಅನ್ನು ಅವರು ಅನಾವರಣಗೊಳಿಸಿದರು.
ಸ್ವಾಯತ್ತ ತಂತ್ರಜ್ಞಾನ, ರೊಬೊಟಿಕ್ಸ್(ರಿಯಾ ರೊಬೋಟ್‌ನಂತೆ), ಡಿಜಿಟಲ್ ಸ್ವತ್ತುಗಳು, ಫಿನ್‌ಟೆಕ್, ಬಾಹ್ಯಾಕಾಶ ಪರಿಶೋಧನೆ, ರಕ್ಷಣೆ, ಕೃಷಿ ತಂತ್ರಜ್ಞಾನ ಮತ್ತು ಆಹಾರ ತಂತ್ರಜ್ಞಾನ ಅನ್ವಯಿಕೆಗಳನ್ನು ಪ್ರದರ್ಶಿಸುವ ನಾವೀನ್ಯತೆ ವೇಗ ವರ್ಧಕವಾದ ನೆಕ್ಸ್ಟ್ ನ್ಯೂ ವೆಂಚರ್ ಸ್ಟುಡಿಯೋವನ್ನು ಸಹ ಅವರು ಪರಿಚಯಿಸಿದರು.
ಉದ್ದೇಶ ಮತ್ತು ಉತ್ಸಾಹವು ಪರಿಣಾಮಕ್ಕೆ ಸಮನಾಗಿರುತ್ತದೆ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ನಾವೀನ್ಯಕಾರರು ಮತುತಿ ನಾಯಕರಾಗಿ ಅಭಿವೃದ್ಧಿ ಉದ್ದೇಶ-ಚಾಲಿತ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ತಿಳಿಸಿದರು.
ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಡಾ.ರಾಧಾಕೃಷ್ಣ ಎಸ್.ಐ ತಾಳ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಡೀನ್‌ಗಳು, ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.