ಉಡುಪಿ| ಮನೆಯಲ್ಲಿದ್ದ ಚಿನ್ನದ ಬಳೆಗಳು ಕಳವು; ಪ್ರಕರಣ ದಾಖಲು
Update: 2025-06-15 20:19 IST
ಉಡುಪಿ, ಜೂ.15: ಇಲ್ಲಿನ ಮೂಡನಿಡಂಬೂರು ಗ್ರಾಮದ ಮನೆಯೊಂದರಲ್ಲಿ ಇದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಬಗ್ಗೆ ವರದಿಯಾಗಿದೆ.
ರಾಜೀವಿ ಎಂಬವರು ಎ.23ರಂದು ಪರಿಚಯದವರ ಮದುವೆ ಕಾರ್ಯ ಕ್ರಮಕ್ಕೆ ಹೋಗಿ ಬಂದು ಮನೆಯಲ್ಲಿ ಇಟ್ಟಿದ್ದ 1,35,000ರೂ. ಮೌಲ್ಯದ ಸುಮಾರು 36 ಗ್ರಾಂ ತೂಕದ 4 ಚಿನ್ನದ ಬಳೆಗಳು ಮೇ 24ರಂದು ಕಳವಾಗಿರುವುದು ಕಂಡುಬಂದಿದೆ. ಇವರ ಮನೆಗೆ ತಮ್ಮನ ಆರೈಕೆಗೆ ಬಂದಿದ್ದ ಸುಜಯ್ ಹಾಗೂ ಜಾನ್ ಕುರಿ ಎಂಬ ವಿ ಕೇರ್‌ನ ಹೋಮ್ ನರ್ಸ್‌ಗಳು ರಜೆಯಲ್ಲಿ ಹೋದವರು ಮರಳಿರುವುದಿಲ್ಲ. ಆದುದರಿಂದ ಇವರೇ ಇದನ್ನು ಕಳವು ಮಾಡಿಕೊಂಡು ಹೋಗಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.