×
Ad

ರೈಲ್ವೆ ಸಚಿವ ಸೋಮಣ್ಣರೊಂದಿಗೆ ಸಂಸದ ಕೋಟ ಚರ್ಚೆ

Update: 2025-06-21 19:18 IST

ಉಡುಪಿ, ಜೂ.21: ಕರಾವಳಿ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೈಲ್ವೆ ಬೇಡಿಕೆಗಳ ಕುರಿತಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರದ ರೈಲ್ವೆ ಸಚಿವ ಸೋಮಣ್ಣ ಅವರನ್ನು ಹೊಸದಿಲ್ಲಿಯ ರೈಲ್ವೆ ಭವನದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಚಿಕ್ಕಮಗಳೂರಿನಿಂದ ತುಮಕೂರು, ಬೆಂಗಳೂರು ಮಾರ್ಗವಾಗಿ ತಿರುಪತಿಗೆ ನೂತನ ರೈಲ್ವೆ ಸೇವೆ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ಸೋಮಣ್ಣ, ಅತೀ ಶೀಘ್ರದಲ್ಲಿ ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸೇವೆಗೆ ನೀಡುವಂತೆ ಸೂಚಿಸಿದರು.

ಬೆಂಗಳೂರು- ಕಾರವಾರ ಮಾರ್ಗದ ರೈಲ್ವೆ ವಿದ್ಯುದ್ದೀಕರಣ ಸಮಸ್ಯೆ ಯಿಂದ ತಾತ್ಕಾಲಿಕವಾಗಿ ಹಗಲು ರೈಲಿಗೆ ಪರ್ಯಾಯವಾಗಿ, ಪಂಚಗಂಗಾ ರಾತ್ರಿ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಬೆಂಗಳೂರು ತಲುಪಲು ವಿಳಂಬವಾಗುತ್ತಿದ್ದು, ಇದರಿಂದ ಸರಕಾರಿ ನೌಕರರು ಸೇರಿ ದಂತೆ, ಹಲವು ಪ್ರಯಾಣಿಕರಿಗೆ ದೈನಂದಿನ ಕರ್ತವ್ಯ ಪಾಲನೆಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.

ಪಂಚಗಂಗಾ ರೈಲು ಸಮಯ ಪಾಲನೆಗೆ ಆದ್ಯತೆ ನೀಡುವಂತೆ ಮತ್ತು ಹೆಚ್ಚುವರಿಯಾಗಿ ಬೆಂಗಳೂರು ಕಾರವಾರದ ಮೂಲಕ ಹೆಚ್ಚುವರಿ ರಾತ್ರಿ ರೈಲು ಮಂಜೂರಾತಿಗೆ ಇದೇ ಸಂದರ್ಭದಲ್ಲಿ ಸಂಸದ ಕೋಟ ಮನವಿ ಮಾಡಿದರು. ಈ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮ ಜರಗಿಸುವುದಾಗಿ ಸಚಿವ ಸೋಮಣ್ಣ ಸೂಚನೆ ನೀಡಿದರು.

ದಿಲ್ಲಿಯ ರೈಲ್ವೆ ಭವನದಲ್ಲಿ ಸೋಮಣ್ಣ ಕರೆದ ಸಭೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳಾದ ರೈಲ್ವೆ ಪಿಇಡಿ ನವೀನ್ ಕುಮಾರ್ ಪರಶುರಾಮ್, ಹಿತೇಂದ್ರ ಮಾಲ್ವೋತ್ರ, ನೀರಜ್ ಕುಮಾರ್ ಮತ್ತು ಸಂಜೀವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News